ಆತ್ಮ ನಿರ್ಭರ ಭಾರತ-ಸ್ವಾವಲಂಬಿ ಭಾರತ: ಡಾ.ರಮೇಶ ಬಾಬು

ಭಾರತದ ಹುಟ್ಟು. ಇದರ ಅರ್ಥ ಬೇರೆ ದೇಶಗಳೊಡನೆ ಸಂಪರ್ಕ ಕಡಿತ ಅಲ್ಲ

0

ಕೋವಿಡ್-೧೯ರಿಂದ ವ್ಯವಹಾರ ಚಟುವಟಿಕೆಗಳ ಮೇಲೆ ಉಂಟಾದ ಆರ್ಥಿಕ ಬಿಕ್ಕಟ್ಟು ಮತ್ತು ಸವಾಲುಗಳ ಪರಿಣಾಮವೆ ಆತ್ಮ ನಿರ್ಭರ ಭಾರತ-ಸ್ವಾವಲಂಬಿ ಭಾರತದ ಹುಟ್ಟು. ಇದರ ಅರ್ಥ ಬೇರೆ ದೇಶಗಳೊಡನೆ ಸಂಪರ್ಕ ಕಡಿತ ಅಲ್ಲ, ದೇಶದ ಸಂಪನ್ಮೂಲಗಳು, ಸ್ಥಳೀಯ ಕೌಶಲ್ಯ, ನೂತನ ಆವಿಸ್ಕಾರ ಮತ್ತು ಕೃಷಿಯಲ್ಲಿ ಮೂಲಸೌಕರ್ಯ, ಚಿಕ್ಕಪುಟ್ಟ ಉಪಯುಕ್ತ ಸಲಕರಣೆಗಳ ಸುಧಾರಣೆ ಮಾಡುವುದು ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ರಮೇಶ ಬಾಬು ಹೇಳಿದರು

ಧಾರವಾಡ : ಕೋವಿಡ್-೧೯ರಿಂದ ವ್ಯವಹಾರ ಚಟುವಟಿಕೆಗಳ ಮೇಲೆ ಉಂಟಾದ ಆರ್ಥಿಕ ಬಿಕ್ಕಟ್ಟು ಮತ್ತು ಸವಾಲುಗಳ ಪರಿಣಾಮವೆ ಆತ್ಮ ನಿರ್ಭರ ಭಾರತ-ಸ್ವಾವಲಂಬಿ ಭಾರತದ ಹುಟ್ಟು. ಇದರ ಅರ್ಥ ಬೇರೆ ದೇಶಗಳೊಡನೆ ಸಂಪರ್ಕ ಕಡಿತ ಅಲ್ಲ, ದೇಶದ ಸಂಪನ್ಮೂಲಗಳು, ಸ್ಥಳೀಯ ಕೌಶಲ್ಯ, ನೂತನ ಆವಿಸ್ಕಾರ ಮತ್ತು ಕೃಷಿಯಲ್ಲಿ ಮೂಲಸೌಕರ್ಯ, ಚಿಕ್ಕಪುಟ್ಟ ಉಪಯುಕ್ತ ಸಲಕರಣೆಗಳ ಸುಧಾರಣೆ ಮಾಡುವುದು ಎಂದು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ರಮೇಶ ಬಾಬು ಹೇಳಿದರು.
ಕೇಂದ್ರ ಸರ್ಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯ ಮತ್ತು ಐ.ಸಿ.ಎ.ಆರ್-ಕೃಷಿ ವಿಜ್ಙಾನ ಕೇಂದ್ರ, ಧಾರವಾಡ ಇವರ ಸಹಯೋಗದಲ್ಲಿ ಆತ್ಮ ನಿರ್ಭರ್ ಕೃಷಿ ಮತ್ತು ಕೇಂದ್ರ ಸರ್ಕಾರದ ಪ್ರಸ್ತುತ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ಧೇಶದಿಂದ ಏರ್ಪಡಿಸಲಾಗಿದ್ದ ವೆಬಿನಾರ(ಅಂತರಜಾಲ ಸಂವಾದ)ದಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೊದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾವಲಂಬಿ ಭಾರತಕ್ಕೆ ಐದು ಆಧಾರ ಸ್ಥಂಭಗಳನ್ನು ರೂಪಿಸಿದೆ ಆರ್ಥಿಕ ವ್ಯವಸ್ಥೆಯ ಬಲವರ್ಧನೆ, ಮೂಲ ಸೌಕರ್ಯಗಳ ಅಭಿವೃದ್ಧಿ, ತಂತ್ರಜ್ಙಾನ ಚಾಲಿತ ವ್ಯೆವಸ್ಥೆ, ರೋಮಾಂಚಕ ಜನಸಂಖ್ಯಾ ಶಾಸ್ತç ಮತ್ತು ಬೇಡಿಕೆ ಹಾಗೂ ಇದರ ಜೊತೆಗೆ ಸಣ್ಣ ಆಹಾರ ಉದ್ಯಮದಾರರ ಉತ್ತೇಜನಕ್ಕಾಗಿ ೧೦ಸಾವಿರ ಕೋಟಿಯ ಯೋಜನೆ, ಇದರ ಅಡಿಯಲ್ಲಿ ಸ್ಥಳೀಯ ಉತ್ಪನ್ನಗಳನ್ನು ಜಾಗತೀಕ ಮಾರುಕಟ್ಟೆಗೆ ತಲುಪಿಸಲು ಉತ್ತೇಜನ ನೀಡುವುದು ಮತ್ತು ಸುಮಾರು ೨ಲಕ್ಷ ಸಣ್ಣ ಆಹಾರ ಉದ್ದಿಮೆದಾರರಿಗೆ ಅನುಕೂಲ ಮಾಡುವ ಮುಖ್ಯ ಉದ್ದೇಶ. ರೈತರ ಹೊಲಗಳಲ್ಲಿ ಕೃಷಿ ಮೂಲ ಸೌಕರ್ಯಕ್ಕಾಗಿ ೧ಲಕ್ಷ ಕೋಟಿ ಅನುದಾನ. ಕಿಸಾನ್ ಕ್ರೇಡಿಟ್ ಕಾರ್ಡ ಮೂಲಕ ೨.೫ಲಕ್ಷ ರೈತರಿಗೆ, ೨ಲಕ್ಷ ಕೋಟಿ ಸಾಲವನ್ನು ನೀಡಲಾಗುವುದು. ಜೇನು ಕೃಷಿ ಉತ್ತೇಜನಕ್ಕಾಗಿ ಸಮಗ್ರ ಜೇನು ಸಾಕಾಣಿಕೆ ಘಟಕ, ಜೇನು ತುಪ್ಪ ಸಂಗ್ರಹಣೆ,ಮಾರುಕಟ್ಟೆ ಮತ್ತು ಸಂಸ್ಕರಣೆಗಾಗಿ ೫೦೦ಕೋಟಿ ಅನುದಾನ. ಪ್ರಧಾನ ಮಂತ್ರಿ ಮತ್ಸö್ಯ ಸಂಪದಾ ಯೋಜನೆಯಡಿ ೨೦ಸಾವಿರ ಕೋಟಿ ಅನುದಾನ. ನಬಾರ್ಡ ಮೂಲಕ ಇಗಾಗಲೆ ನೀಡುತ್ತಿದ್ದ ೯೦ಸಾವಿರ ಕೋಟಿ ಜೊತೆಗೆ ೩೦ಸಾವಿರ ಕೋಟಿ ಹೆಚ್ಚುವರಿ ಹಣಕಾಸಿನ ಬೆಂಬಲ ವಿಸ್ತರಿಸಲಿದೆ ಎಂದು ತಿಳಿಸಿದರು.

ಪಿಪಲ್ ಪಸ್ಟ ಪೌಂಡೇಷನ್‌ನ ಸಿ.ಇ.ಒ ಡಾ. ಪ್ರಕಾಶ ಭಟ್ ವೆಬಿನಾರನಲ್ಲಿ ಭಾಗವಹಿಸಿ ಮಾತನಾಡಿ, ಬೀತ್ತನೆ ಸಮಯದಲ್ಲಿ ರೈತರಿಗೆ ಬೆಲೆಯ ಬರವಸೆ, ಒಪ್ಪಂದದ ಬೆಳೆ, ಮಾರುಕಟ್ಟೆಯ ತೊಂದರೆಗಳನ್ನು ಕಡಿಮೆ ಮಾಡುವುದು, ಆಹಾರ ಬೆಳೆಗಳ ಸಮಸ್ಯ ಪರಿಹಾರ ಮತ್ತು ಗುತ್ತಿಗೆ ಕೃಷಿಯನ್ನು ಉತ್ತೇಚಿಸುವ ಮೂಲಕ ರೈತರಿಗೆ ನೇರವಾಗುವಲ್ಲಿ ಆತ್ಮ ನಿರ್ಭರ್ ಕೃಷಿ ಉಪಯುಕ್ತ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಐ.ಸಿ.ಎ.ಆರ್.ಕೃಷಿ ವಿಜ್ಙಾನ ಕೇಂದ್ರ ಹಿರಿಯ ವಿಜ್ಙಾನಿ ಮತ್ತು ಮುಖ್ಯೆಸ್ಥೆ ಡಾ.ಶುಭಾ.ಎಸ್ ಮಾತನಾಡಿದರು.

ಬಳ್ಳಾರಿಯ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪನಿರ್ದೇಶಕ ಡಾ.ಜಿ.ಡಿ.ಹಳ್ಳಿಕೇರಿ ಪ್ರಾಸ್ಥಾವಿಕವಾಗಿಮಾತನಾಡಿದರು. ಧಾರವಾಡ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಮುರಳೀಧರ ಕಾರಭಾರಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ವೆಬಿನಾರನಲ್ಲಿ ಕೃಷಿ ವಿಜ್ಙಾನ ಕೇಂದ್ರದ ಪ್ರೋ.ವಿಜಯಕುಮಾರ ಮತ್ತು ಸಿಬಂಧಿವರ್ಗ, ಸ್ವಯಂ ಸೇವಾ ಸಂಸ್ಥಯ ಕಾರ್ಯಕರ್ತರು, ರೈತರು, ಸಂಶೋದನಾ ವಿದ್ಯಾರ್ಥಿಗಳು ಮುಂತಾದವರು ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.