ಶಿಕ್ಷಣದ ಜೊತೆಗೆ ಪ್ರತಿಭೆಗಳು ಗುರುತಿಸಬೇಕು: ಪ್ರೊ.ರವೀಂದ್ರನಾಥ. ಎನ್.ಕದಂ

0

Gummata Nagari : Dharwad News

ಧಾರವಾಡ : ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಯಾವಾತ್ತಿಗೂ ಬಿಡದೆ ಅದನ್ನ ಮುಂದುವರೆಸಿಕೊಂಡು ಹೋಗಬೇಕು. ಶಿಕ್ಷಣದ ಜೊತೆ ಜೊತೆಗೆ ಪ್ರತಿಭೆಗಳು ಇರಬೇಕು ಎಂದು ಕವಿವಿ ಯ ಮೌಲ್ಯಮಾಪನ ಕುಲಸಚಿವರಾದ ಪ್ರೊ.ರವೀಂದ್ರನಾಥ. ಎನ್.ಕದಂ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇಂದು ಕರ್ನಾಟಕ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ, ಬಿ,ಬಿ,ಎ ಸಬಾಗಂಣದಲ್ಲಿ  2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಜಿಮಖಾನದ ಸಾಂಸ್ಕೃತಿಕ ಮತ್ತು ಇತರೆ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತಿ ಮುಖ್ಯ. ಇನ್ನೂ ಆದಷ್ಟು ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಕರ್ನಾಟಕ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರು  ಹಾಗೂ ಜಿಮಖಾನದ ಅಧ್ಯಕ್ಷರಾದ ಡಾ.ಡಿ.ಬಿ.ಕರಡೋಣಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಿಮಖಾನದ ಕಾರ್ಯಧ್ಯಕ್ಷರಾದ ಡಾ.ಮಂಜುಳಾ ಚಲವಾದಿ, ಉಪಾಧ್ಯಕ್ಷರಾದ ಡಾ.ವ್ಹಿ‌. ಶಾರದಾ, ಹಿಂದಿನ ಪ್ರಾಚಾರ್ಯರಾದ ಡಾ.ವೀಣಾ ಶಾಂತೇಶ್ವರ, ಫ್ರೊ.ಎಸ್. ಐನಾಪುರ, ವಿದ್ಯಾರ್ಥಿ ಕಾರ್ಯದರ್ಶಿಯಾದ ಸಮರ್ಥ ದೇಶಪಾಂಡೆ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.  ಸಮರ್ಥ ದೇಶಪಾಂಡೆ ವಂದಿಸಿದರು, ಪ್ರಭುಲಿಂಗ ನಾಯಕೋಡಿ ನಿರೂಪಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.