ಪರಿಹಾರ ಸಿಕ್ಕಿಲ್ಲ, ಪರಿಸ್ಥಿತಿ ಗಂಭೀರ ಆಗಿದೆ: ಬೆಳೆಗಾರರ ಕಣ್ಣೀರು

0

Gummata Nagari : Dharwad News

ಹುಬ್ಬಳ್ಳಿ : ಕಿಲ್ಲರ ಕೊರೋನಾದಿಂದ ಮೂರು ನಾಲ್ಕು ತಿಂಗಳು ಲಾಕ್ ಡೌನ್ ಘೋಷಣೆ ಮಾಡಿದಾಯ್ತು. ಕೊರೋನಾ ಸಂಕಷ್ಟದ ವೇಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು ಆಯ್ತು.. ಆದರೆ ರಾಜ್ಯ ಸರ್ಕಾರ ಘೋಷಿಸಿದ ಪರಿಹಾರ ಹೂವು- ಹಣ್ಣು, ತರಕಾರಿ ಬೆಳಗಾರರಿಗೆ ಮಾತ್ರ ದೊರೆತಿಲ್ಲ. ಅದು ಅಲ್ಲದೆ ಧಾರವಾಡ ಜಿಲ್ಲೆಯಲ್ಲಿ ಸಾವಿರಾರು ರೈತರು ಪರಿಹಾರಕ್ಕೆ ಅರ್ಜಿ ಹಾಕಿದರು ಪರಿಹಾರ ದೊರೆತಿದ್ದು ಮಾತ್ರ ಬೆರಳೆಣಿಕೆಯಷ್ಟು ರೈತರಿಗೆ.

ಕಿಲ್ಲರ್ ಕೊರೋನಾ ಬಂದಿದ್ದೆ ಬಂದಿದ್ದು, ಎಲ್ಲ ವಲಯಗಳ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿ ಬಿಟ್ಟಿದೆ.  ಅದರಲ್ಲೂ ರೈತಾಪಿ ಸಮುದಾಯ ಕೊರೋನಾ ಹಾವಳಿಯಿಂದ ಇನ್ನಿಲ್ಲದ ನಷ್ಟ ಅನುಭವಿಸಿದ್ದಾರೆ.  ಸರ್ಕಾರ ಮೂರು ನಾಲ್ಕು ತಿಂಗಳು ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ರೈತರು ಬೆಳೆದ ಬೆಳೆಗಳನ್ನ ಮಾರಾಟ ಮಾಡಲಾಗದೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

ಈ ಹಿನ್ನೆಲೆಯಲ್ಲೆ ರಾಜ್ಯ ಸರ್ಕಾರ ಹೂವು- ಹಣ್ಣು. ತರಕಾರಿ ಬೆಳೆಗಾರರಿಗೆ ಅಲ್ಪ ಪ್ರಮಾಣದ ಪರಿಹಾರ ಘೋಷಣೆ ಎನೋ ಮಾಡಿದೆ. ಆದರೆ ಪರಿಹಾರ ಘೋಷಣೆಯಾದರೂ ರೈತರಿಗೆ ಮಾತ್ರ ಸರಿಯಾಗಿ ವಿತರಣೆಯಾಗುತ್ತಿಲ್ಲ. ಅದರಲ್ಲೂ ಧಾರವಾಡ ಜಿಲ್ಲೆಯ ಹೂವು, ಹಣ್ಣು. ತರಕಾರಿ ಬೆಳೆಗಾರರು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದರು ಪರಿಹಾರ ಮಾತ್ರ ಸಿಗ್ತಾ ಇಲ್ಲ.

ಧಾರವಾಡ ಜಿಲ್ಲೆಯಲ್ಲಿ ಪರಿಹಾರಕ್ಕಾಗಿ 1952 ಹೂವು ಬೆಳೆಗಾರರು ಅರ್ಜಿ ಸಲ್ಲಿಸಿದ್ದಾರೆ ಅದರಲ್ಲಿ ಕೇವಲ 194 ರೈತರಿಗೆ ಮಾತ್ರ ಪರಿಹಾರ ದೊರೆತಿದೆ. ಇನ್ನೂ 327 ಹಣ್ಣು ಬೆಳೆಗಾರರು ಪರಿಹಾರಕ್ಕೆ ಅರ್ಜಿ ಹಾಕಿದರೆ ಕೇವಲ 210 ರೈತರಿಗೆ ಪರಿಹಾರ ನೀಡಲಾಗಿದೆ. 2822 ತರಕಾರಿ ಬೆಳಗಾರರ ಪೈಕಿ 1251 ರೈತರಿಗೆ ಮಾತ್ರ ಪರಿಹಾರ ದೊರಕಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೂವು, ಹಣ್ಣು ತರಕಾರಿ ಬೆಳೆದ ರೈತರಿಗೆ ಪರಿಹಾರ ದೊರೆಯದಿರುವುದು ದುರಂತವೇ ಸರಿ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.