ಗಾಂಧಿಯವರು ವ್ಯಕ್ತಿ ಅಲ್ಲ, ಅವರೊಂದು ಮಹಾನ್ ಶಕ್ತಿ

0

Gummata Nagari : Dharwad News

ಧಾರವಾಡ : ಗಾಂಧಿಯವರು ವ್ಯಕ್ತಿ ಅಲ್ಲ, ಅವರೊಂದು ಮಹಾನ್ ಶಕ್ತಿ, ಜಗತ್ತು ಬದಲಾಗಬೇಕು ಅನ್ನುವವರು, ಮೊದಲು ನಾವು  ಬದಲಾಗಬೇಕು ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎ.ಎಸ್ ಬೆಲ್ಲದ್ ಅಭಿಪ್ರಾಯಪಟ್ಟರು.

ಅವರು ಮಹಾತ್ಮ ಗಾಂಧಿಯವರ 151ನೇ ಮತ್ತು ಮಾಜಿ ಪ್ರಧಾನಿ ಡಾ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ 116ನೇ ಜಯಂತಿ ಅಂಗವಾಗಿ ಕರ್ನಾಟಕ ಕಾಲೇಜಿನ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಗಾಂಧಿಯವರ ಆದರ್ಶ ತತ್ವಗಳನ್ನು ಇಂದಿನ ಯುವ ಪೀಳಿಗೆಯ ಮಕ್ಕಳು ಬೆಳೆಸಿಕೊಂಡು ಮುನ್ನಡೆದರೆ ನಮ್ಮ ದೇಶ ರಾಮ ರಾಜ್ಯವಾಗುವುದು  ಎಂದರು.

ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಬಿ.ಕರಡೋಣಿ ಮಾತನಾಡಿ  ಸ್ವಾತಂತ್ರ್ಯದ ನಂತರ‌ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ  ಮತ್ತು  ಗೃಹ ಸಚಿವರಾಗಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅವರು 1965 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ದೇಶವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ “ಜೈ ಜವಾನ್, ಜೈ ಕಿಸಾನ್” ಘೋಷ್ ವಾಕ್ಯ ಯುದ್ಧದ ಸಮಯದಲ್ಲಿ ಬಹಳ ಜನಪ್ರಿಯವಾಯಿತು ಎಂದರು.

ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕೆಸಿಡಿ ಜಿಮಖಾನದ ಉಪಾಧ್ಯಕ್ಷರಾದ ಡಾ. ವ್ಹಿ.ಶಾರದಾ, ಡಾ.ಮುಕುಂದ ಲಮಾಣಿ, ಸೇರಿದಂತೆ ಮಹಾವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.