ಮಗುವಿನ ಹೃದಯ ಚಿಕಿತ್ಸೆ ಮಾಡಿ ಪುನರಜನ್ಮ ನೀಡಿದ ವೈದ್ಯರು…

0

Gummata Nagari : Dharwad News

ಧಾರವಾಡ : ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರು 20 ದಿನದ ಪುಟ್ಟ ಕಂದಮ್ಮನಿಗೆ ಹೃದಯ ಚಿಕಿತ್ಸೆ ಮಾಡುವ ಮೂಲಕ ಪುನರಜನ್ಮವನ್ನು ನೀಡಿದ್ದಾರೆ.

ಹುಬ್ಬಳ್ಳಿ ಮೂಲದ 20 ದಿನದ ಮಗು ಕೇವಲ 2.3 ಕೆ.ಜಿ. ತೂಕವಿತ್ತು. ಈ ಮಗುವಿಗೆ ಹೃದಯದಲ್ಲಿ ರಕ್ತ ಪರಿಚಲನೆಯ ಸಮಸ್ಯೆಯ ಕಾರಣದಿಂದ ಧಾರವಾಡದ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ಗೆ ಕರೆತರಲಾಯಿತು. ಮಗುವಿಗೆ ಹೃದಯದ ಮಹಾಪಧಮನಿಯಲ್ಲಿ ತೊಂದರೆ ಕಂಡು ಬಂದಿದ್ದು, ಇದರಿಂದಾಗಿ ರಕ್ತ ಪರಿಚಲನೆಯ ಸಮಸ್ಯೆ ಇರುವುದು ದೃಢಪಟ್ಟಿತು. ಇದರ ಜತೆಗೆ ಎಡಬಾಗದ ಕುಕ್ಷಿ ನಿಷ್ಕಿಯವಾಗಿರುವುದು ಕಂಡುಬಂತು. ಹೃದಯ ರೋಗ ತಜ್ಞರ ತಂಡ ಈ ಪ್ರಕರಣವನ್ನು ದಾಖಲಿಸಿಕೊಂಡಿತು. ಸಂಕೀರ್ಣ ಹಾಗೂ ತೀರಾ ಅಪರೂಪದ ಎಡ ಶೀರ್ಷಧಮನಿ ಅಪಧಮನಿ ಕತ್ತರಿಸಿ ಮತ್ತು ಬಲೂನ್ ಮೂಲಕ ಹಿಗ್ಗಿಸುವಿಕೆ ಮಾಡಿ ಆ ಭಾಗವನ್ನು ಒಗ್ಗೂಡಿಸುವ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಯಿತು. ಚಿಕ್ಕಮಕ್ಕಳ ಹೃದಯ ರೋಗ ತಜ್ಞರಾದ ಡಾ.ಅರುಣ್ ಕೆ.ಬಬಲೇಶ್ವರ್, ಮಕ್ಕಳ ಹಾಗೂ ವಯಸ್ಕರ ಹಿರಿಯ ಮತ್ತು ಮುಖ್ಯ ಹೃದಯ ಶಸ್ತಚಿಕಿತ್ಸಕರಾದ ಡಾ. ರವಿವರ್ಮ ಪಾಟೀಲ್ ಮತ್ತು ಹೃದಯ ಅರಿವಳಿಕೆ ತಜ್ಞರ ತಂಡ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಈ ಚಿಕಿತ್ಸೆಯನ್ನು ಆಯುಷ್ಮನ್ ಯೋಜನೆಯಡಿ ಮಾಡಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.