ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

0

gummata nagari : Dharwad

ಧಾರವಾಡ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ ಅವರು ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದರು.
ಇಲ್ಲಿನ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ತಹಶೀಲದಾರ ಕಚೇರಿಗೆ ತೆರಳಿ ಉಪ ತಹಶಿಲ್ದಾರ ಎಸ್.ಪಿ.ಹೆಬ್ಬಳ್ಳಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಹಿರಿಯ ನ್ಯಾಯವಾದಿ, ರೈತ ಹಿತರಕ್ಷಣಾ ಪರಿವಾರದ ಅಧ್ಯಕ್ಷ ಪಿ.ಎಚ್.ನೀರಲಕೇರಿ, ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಜಿಲ್ಲಾ ಜೆಡಿಯು ಅಧ್ಯಕ್ಷ ಶ್ರೀಶೈಲಗೌಡ ಕಮತರ, ರಾಷ್ಟ್ರಪ್ರÀಶಸ್ತಿ ವಿಜೇತ ಶಿಕ್ಷಕ ಶಂಕರ ಗಂಗಣ್ಣವರ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಧೀರ ಮುಧೋಳ, ಕಲಾವಿದ ಮಂಜುನಾಥ ಹಿರೇಮಠ,ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮಣ ದೊಡ್ಡಮನಿ, ಶಿಕ್ಷಕ ನಾರಾಯಣ ಭಜಂತ್ರಿ, ಪತ್ರಕರ್ತರಾದ ನರಸಿಂಹಮೂರ್ತಿ ಪ್ಯಾಟಿ, ಪುಂಡಲೀಕ ಹಡಪದ, ಮಂಜುನಾಥ ಕವಳಿ ಮತ್ತಿತರರು ಉಪಸ್ಥಿತರಿದ್ದರು.¸

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.