ಧಾರವಾಡ ಐಐಟಿ ಮತ್ತು ಐಐಐಟಿ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಭೇಟಿ

0

Gummata Nagari : Dharwad News

ಧಾರವಾಡ : ಧಾರವಾಡದ ಐ.ಐ.ಟಿ ಹಾಗೂ ಐ.ಐ.ಐ.ಟಿ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಭೇಟಿ ನೀಡಿ ರಸ್ತೆ, ಕಟ್ಟಡ ಸೇರಿದಂತೆ ವಿವಿಧ ಮೂಲ ಸೌಕರ್ಯ ಕಾಮಗಾರಿಗಳ ನಿರ್ಮಾಣ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ಐ.ಐ.ಟಿಯ ನೂತನ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಹಾಗೂ ಡಾಂಬರೀಕರಣ, ನೂತನ ಕಟ್ಟಡ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲು ಮತ್ತು ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಸರ್ವೆ ಮಾಡಿ ಐ.ಐ.ಟಿ ನೂತನ ಕ್ಯಾಂಪಸ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಧಾರವಾಡ ತಾಲೂಕಿನಲ್ಲಿ ಐ.ಐ.ಐ.ಟಿ.ಯ ಶಾಶ್ವತ ಶಿಬಿರಕ್ಕೆ ರಸ್ತೆ ಕಾಮಗಾರಿಯು ರೂ. 720.00 ಲಕ್ಷಗಳಿಗೆ ಸರ್ಕಾರದಿಂದ ಅನುಮೋದನೆಯಾಗಿದ್ದು, ಈ ಕಾಮಗಾರಿಯ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ. ರಸ್ತೆ ಕಾಮಗಾರಿಯನ್ನು ಪರೀಕ್ಷಿಸಲಾಗಿ ಇಟಿಗಟ್ಟಿ ಗ್ರಾಮದಲ್ಲಿ ಕಾಂಕ್ರೀಟ್ ಗಟಾರ ಕಾಮಗಾರಿ ಹಾಗೂ ಸಿ.ಡಿ. ಗಳ ಕಾಮಗಾರಿ ಪೂರ್ಣಗೊಂಡಿದ್ದು, ಫಾರ್ಮೇಶನ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಗುಣ್ಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾಮಗಾರಿಗಳ ವೀಕ್ಷಣೆಯ ನಂತರ ಜಿಲ್ಲಾಧಿಕಾರಿಗಳು ಪ್ರಸ್ತುತ ಕಾರ್ಯನಿರ್ವಹಿಸುವ ವಾಲ್ಮಿ ಕಟ್ಟಡದ ಐ.ಐ.ಟಿ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಮತ್ತು ಆಡಳಿತ ಮಂಡಳಿ ಸದ್ಯಸರೊಂದಿಗೆ ಕಾಮಗಾರಿಗಳ ಪ್ರಗತಿ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚಿಸಿದರು.

ಸಭೆಯಲ್ಲಿ ಐ.ಐ.ಟಿ ಧಾರವಾಡದ ನಿರ್ದೇಶಕ ಪ್ರೋ.ಪಿ.ಶೇಷು, ಡೀನ್‌ರಾದ ಪ್ರೋ.ನಾಗೇಶ್ ಆರ್.ಐಯ್ಯರ್, ಪ್ರೋ.ಎಸ್.ಆರ್.ಎಮ್. ಪ್ರಸನ್, ಪ್ರೋ.ಎಸ್.ವಿ.ಪ್ರಭು, ಪ್ರೋ.ಬಿ.ಎಲ್.ತೆಂಬೆ ಮತ್ತು ರಘು ಬಾಬು, ಐ.ಐ.ಐ.ಟಿಯ ಕುಲಸಚಿವ ಬಸವರಾಜಪ್ಪ ಎಸ್., ಅಧಿಕಾರಿಗಳು ಹಾಗೂ ಅಧ್ಯಾಪಕರು, ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಜಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಕ ಅಭಿಯಂತರ ಎಸ್.ಬಿ.ಚೌಡನ್ನವರ, ತಹಶಿಲ್ದಾರ ಸಂತೋಷ ಬಿರಾದಾರ, ತಾಲೂಕಾ ಎಡಿಎಲ್‌ಆರ್ ಕೆ.ಜಿ.ಲಟ್ಟಿ, ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.