ರೆಮ್‌ಡಿಸಿವರ್ ಚುಚ್ಚುಮದ್ದನ್ನು ಕದ್ದು ಅದನ್ನು ಹೆಚ್ಚಿನ ಬೆಲೆಗೆ ಅನಧಿಕೃತವಾಗಿ ಮಾರಾಟ ಮಾಡುವ ಜಾಲವನ್ನು ಬೇಧಿಸಿರುವ ವಿಜಯಪುರ ಜಿಲ್ಲೆಯ ಪೊಲೀಸರು

0

Gummata Nagari : vijaypur

ವಿಜಯಪುರ : ಕೋವಿಡ್ ರೋಗಿಗಳಿಗೆ ಜೀವರಕ್ಷಕವಾಗಿರುವ ರೆಮ್‌ಡಿಸಿವರ್ ಚುಚ್ಚುಮದ್ದನ್ನು ಕದ್ದು ಅದನ್ನು ಹೆಚ್ಚಿನ ಬೆಲೆಗೆ ಅನಧಿಕೃತವಾಗಿ ಮಾರಾಟ ಮಾಡುವ ಜಾಲವನ್ನು ಬೇಧಿಸಿರುವ ವಿಜಯಪುರ ಜಿಲ್ಲೆಯ ಪೊಲೀಸರು 9 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಜಾಲದಲ್ಲಿ ಭಾಗಿಯಾಗಿರುವ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ರೆಮ್‌ಡಿಸಿವರ್ ಚುಚ್ಚುಮದ್ದನ್ನು ಕದ್ದು ಅದನ್ನು ಹೆಚ್ಚಿನ ಬೆಲೆಗೆ ಅನಧಿಕೃತವಾಗಿ ಮಾರಾಟ ಮಾಡುವ ಜಾಲವನ್ನು ಬೇಧಿಸಿರುವ ವಿಜಯಪುರ ಜಿಲ್ಲೆಯ ಪೊಲೀಸರು

ಅತ್ತ ಕೋವಿಡ್ ಸೋಂಕಿತರು ರೆಮ್‌ಡಿಸಿವಿರ್ ಚುಚ್ಚುಮದ್ದಿಲ್ಲದೇ ಪರದಾಡುತ್ತಿರುವ ಈ ಹೊತ್ತಿನಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರಿಂದ ರೋಗಿಗಳು ಜೀವರಕ್ಷಕ ಔಷಧಿ ಪಡೆದುಕೊಳ್ಳಲು ಸಾಲ ಮಾಡುವಂತಹ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈಗ ಪೊಲೀಸರು ಈ ಜಾಲವನ್ನು ಬೇಧಿಸಿ ಅವರ ಹೆಡೆಮುರಿ ಕಟ್ಟಿದೆ.
ಬಂಧಿತ ಆರೋಪಿಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಯ ಡಿ ಗ್ರುಪ್ ನೌಕರರಾದ ರಾಜೇಸಾಬ ಬಾಬು ಹತ್ತರಕಿಹಾಳ, ಇಮ್ತಿಯಾಜ್ ಹುಸೇನಸಾಬ ಮಟ್ಟಿ, ಶಿವರಾಜಕುಮಾರ ಸಿದ್ಧಗೊಂಡ ಮದರಿ, ಮೌಲಾಲಿ ರಜಾಕಸಾಬ ಹತ್ತರಕಿಹಾಳ, ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಜಕ್ಕಪ್ಪ ತಡಲಗಿ, ಡಾ.ಬಾಂಗಿ ಆಸ್ಪತ್ರೆಯ ಓಟಿ ಸಹಾಯಕ ಮುನ್ನಾ ಅಹೇರಿ, ಬಂಜಾರಾ ಆಸ್ಪತ್ರೆಯ ಫಾರ್ಮಾಸಿಸ್ಟ್ ಸಂಜೀವ ಜೋಶಿ ಎಂಬಾತರನ್ನು ಬಂಧಿಸಲಾಗಿದೆ. ಇನ್ನೂ ಪ್ರಕರಣದಲ್ಲಿ ಭಾಗಿಯಾಗಿರುವ ಹಾಗೂ ಪ್ರಸ್ತುತ ಪರಾರಿಯಾಗಿರುವ ವಿಜಯಪುರ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸಗಳಾದ ಯಲ್ಲಮ್ಮ ಕನ್ನಾಳ, ಸುರೇಖಾ ಗಾಯಕವಾಡ ಅವರ ಬಂಧನಕ್ಕೆ ಜಾಲ ಬೀಸಲಾಗಿದೆ.

ರೆಮ್‌ಡಿಸಿವರ್ ಚುಚ್ಚುಮದ್ದನ್ನು ಕದ್ದು ಅದನ್ನು ಹೆಚ್ಚಿನ ಬೆಲೆಗೆ ಅನಧಿಕೃತವಾಗಿ ಮಾರಾಟ ಮಾಡುವ ಜಾಲವನ್ನು ಬೇಧಿಸಿರುವ ವಿಜಯಪುರ ಜಿಲ್ಲೆಯ ಪೊಲೀಸರು

ಬಂಧಿತರಿಂದ ರೆಮ್‌ಡಿಸಿವರ್ ಎಂಬುವ ಬಿಳಿ ಪೌಡರ್ ಇರುವ ಚುಚ್ಚುಮದ್ದು ಇರುವ ಮೂರು ಬಾಟಲ್‌ಗಳು, ಉಪಯೋಗಿಸಿದ 24 ಖಾಲಿ ಸೀಸೆಗಳು, 64 ಸಾವಿರ ರೂ. ನಗದು, 7 ಮೊಬೈಲ್‌ಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.
ಈ ಕುರಿತು ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಮಾಹಿತಿ ನೀಡಿ, ಈಗಾಗಲೇ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಆರೋಪಿಗಳ ವಿರುದ್ಧ ಡ್ರಗ್ಸ್ ಕಂಟ್ರೋಲ್ ಆ್ಯಕ್ಟ್ 1940 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.