ವಿದ್ಯುತ್ ತಂತಿ ತಗಲಿ ವ್ಯಕ್ತಿ ಸಾವು

0

Gummata Nagari : Raichur News

ಮಾನ್ವಿ : ತಾಲೂಕಿನ ಜೂಕೂರು ಗ್ರಾಮದ ಆಂಜನೇಯ ತಂದೆ ಸಿದ್ದಪ್ಪ  (54)ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಆಂಜನೇಯ  ಎಂದಿನಂತೆ  ಹೊಲಕ್ಕೆ ಹೋದಾಗ ಪಕ್ಕದಲ್ಲಿ ಹಾಕಲಾಗಿದ್ದ ವಿದ್ಯುತ್ ವೈರ್ ಬಿದ್ದಿದ್ದರಿಂದ ವ್ಯಕ್ತಿಗೆ ತಗುಲಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅವರ ಪತ್ನಿ ಸರೋಜಮ್ಮ ಪ್ರಾಣಾಪಯದಿಂದ ಪಾರಾಗಿದ್ದಾರೆ. ಈ ಕುರಿತು ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ  ಘಟನೆಯಿಂದ  ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ .ಮೃತ ವ್ಯಕ್ತಿಗೆ ನಾಲ್ಕು ಹೆಣ್ಮಕ್ಕಳು ಒಬ್ಬ ಗಂಡು ಮಕ್ಕಳನ್ನು  ಆಗಲಿದ್ದಾರೆ.ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.