ಕಮರಿಗೆ ಜಾರಿದ ಬಸ್ ತಪ್ಪಿದ ಅನಾಹುತ

0

Gummata Nagari
ಧಾರವಾಡ : ಹುಬ್ಬಳ್ಳಿ- ಇಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಹೆಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಕಮರಿಗೆ ಜಾರಿದ್ದು, ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದ ಘಟನೆ ಹಿರೇಹಳ್ಳದ ಸಮೀಪ ನಡೆದಿದೆ.

ಸುಮಾರು 10 ಪ್ರಯಾಣಿಕರಿದ್ದ ಬಸ್, ಎದುರಿಗೆ ಕುರಿ ಹೇರಿಕೊಂಡು ಬರುತ್ತಿದ್ದ ವಾಹನ ಮುಂದೆ ಬಂದಾಗ, ಪಾಟಾ ಕಟ್ ಆಗಿ ಕಮರಿಗೆ ತಿರುವಿದೆ. ಚಾಲಕನ ಜಾಣಾಕ್ಷತನದಿಂದ ಬ್ರೇಕ್ ಗಟ್ಟಿ ಹಿಡಿದು ಕಮರಿಗೆ ಬೀಳದಂತೆ ತಡೆದಿದ್ದಾರೆ.

ಬಸ್ ಎದುರಿಗೆ ಬರುತ್ತಿದ್ದ ವಾಹನದವರು ಇದನ್ನ ನೋಡಿ ಗಾಬರಿಯಾಗಿ, ಅವರ ವಾಹನವೂ ಸ್ವಲ್ಪ ರಸ್ತೆಯನ್ನ ಬಿಟ್ಟು ಹೋಗಿವೆ.ಹೆಬ್ಬಳ್ಳಿ-ಹುಬ್ಬಳ್ಳಿ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ.

ರಸ್ತೆಯ ಅಂಚಿನಲ್ಲಿ ತೆಗ್ಗು ಇರುವುದರಿಂದ ವಾಹನಗಳು ಸೈಡ್ ತೆಗೆದುಕೊಳ್ಳುವಾಗ ಕಮರಿಗೆ ಬೀಳುವಂತಹ ಸ್ಥಿತಿ ಸಾಮಾನ್ಯವಾಗಿದೆ ಭಾರೀ ಅನುಹುತ ಸಂಭವಿಸುವ ಮೊದಲು ಈ ರಸ್ತೆ ಸರಿಪಡಿಸಬೇಕಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.