ನಾಲ್ವರು ಬೈಕ್ ಕಳ್ಳರ ಬಂಧನ

0

Gummata Nagari : Bijapur News

ಬಿಜಾಪುರ : ಯಾದಗಿರಿ, ಬಿಜಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ 30 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಜಪ್ತು ಮಾಡಿಕೊಂಡಿದ್ದಾರೆ.

ಮೌನೇಶ ಗುರಣ್ಣ ಬಡಿಗೇರ (28), ನಿಂಗಣ್ಣ ಬಸಪ್ಪ ಪೂಜಾರಿ (38), ಮೀರಸಾಬ್ ರಜಾಕಸಾಬ್ ಬಳಿಗಾರ (29), ಮೆಹಬೂಬ್ ತಾಹೀರಹುಸೇನ್ ಬಳಿಗಾರ (28) ಬಂಧಿತರು. ಬಂಧಿತವಾಗಿರುವ ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 50 ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ ಅಗರವಾಲ್, ಬೈಕ್ ಕಳ್ಳತನ ಪ್ರಕರಣದಲ್ಲಿ ಬಂಧಿತವಾಗಿರುವ ಆರೋಪಿಗಳು ನಕಲಿ ಕೀ ಬಳಕೆ ಮಾಡಿ ವಿಶೇಷವಾಗಿ ಹಿರೋಹೋಂಡಾ ಸ್ಪ್ಲೆಂಡರ್ ವಾಹನವನ್ನು ಕಳ್ಳತನ ಮಾಡಿದ್ದು ಬಳಕೆಗೆ ಬಂಧಿದೆ, ಬಿಜಾಪುರ, ಯಾದಗಿರಿ ಮೊದಲಾದ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದರು.

ಸರಣಿ ಕಳ್ಳತನ ಪ್ರಕರಣ ಬೇಧಿಸಲು ಎಎಸ್‌ಪಿ ಡಾ.ಶ್ರೀರಾಮ ಅರಸಿದ್ಧಿ ನೇತೃತ್ವದಲ್ಲಿ ಡಿವೈಎಸ್‌ಪಿ ಶಾಂತವೀರ, ಪೊಲೀಸ್ ಅಧಿಕಾರಿಗಳಾದ ಆನಂದ ವಾಘ್ಮೋಡೆ, ಶಿವಾಜಿ ಪವಾರ, ಶ್ರೀಮತಿ ಗಂಗೂ ಬಿರಾದಾರ ಅವರನ್ನೊಳಗೊಂಡ ತನಿಖಾ ತಂಡ ರಚನೆ ಮಾಡಲಾಗಿತ್ತು, ಈ ತನಿಖಾ ತಂಡ ಈ ಪ್ರಕರಣವನ್ನು ಬೇಧೀಸುವಲ್ಲಿ ಯಶಸ್ವಿಯಾಗಿದ್ದು, ಈ ಎಲ್ಲ ಅಧಿಕಾರಿ, ಸಿಬ್ಬಂದಿಗಳ ಕರ್ತವ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಲಾಗಿದೆ ಎಂದು ಎಸ್.ಪಿ. ಅನುಪಮ ಅಗರವಾಲ್ ತಿಳಿಸಿದರು.

ಎಟಿಎಂ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣ: ಮೂವರ ಬಂಧನ

ಕಳೆದ ಆ.25ರಂದು ಸಿಂದಗಿ ಪಟ್ಟಣದ ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ನನ್ನು ಕೊಲೆ ಮಾಡಿ ಎಟಿಎಂ ದರೋಡೆಗೆ ಯತ್ನಿಸಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಾಪರಾಧಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅನೀಲ್ ಜಟ್ಟೆಪ್ಪ ಬರಗಾಲ ಉರ್ಫ್ ಹೊಸಮನಿ ಉರ್ಫ್ ದೊಡಮನಿ, ದಯಾನಂದ ಸಿದ್ಧಪ್ಪ ಹೊಸಮನಿ ಎಂಧು ಗುರುತಿಸಲಾಗಿದೆ. ಈ ಎಲ್ಲ ಆರೋಪಿಗಳನ್ನು ಕೊಂಡಗೂಳಿ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಎಸ್.ಪಿ. ಅನುಪಮ ಅಗರವಾಲ್ ವಿವರಿಸಿದರು.

ಬಂಧಿತವಾಗಿರುವ ಆರೋಪಿಗಳು ಕಳೆದ ಆಗಸ್ಟ್ 25 ರಂದು ಸಿಂದಗಿ ಪಟ್ಟಣದ ಐಸಿಐಸಿಐ ಬ್ಯಾಂಕ್‌ನ ವಿದ್ಯುತ್ ಸರಬರಾಜು ಬಂದ್ ಮಾಡಿ ಕಬ್ಬಿಣದ ಸುತ್ತಿಗೆಯಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಎಸ್.ಪಿ. ವಿವರಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.