ಬೈಕ್ ಕಳ್ಳನ ಬಂಧನ ಏಳು ಬೈಕ್ ವಶ

ಅಥಣಿ ಪೊಲೀಸರ ಕಾರ್ಯಾಚರಣೆ

0

Gummata Nagari : Belgavi News

ಅಥಣಿ : ಪೋಲಿಸರ ಭರ್ಜರಿ ಕಾರ್ಯಾಚರಣೆಯಿಂದ ಓರ್ವ ಬೈಕ್ ಕಳ್ಳನನ್ನು ಬಂಧಿಸಲಾಗಿದ್ದು 1,40, 000 ಲಕ್ಷ ಮೌಲ್ಯದ ಏಳು ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಮೋಟರ ಸೈಕಲ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವ  ಸಲುವಾಗಿ ಪೊಲೀಸ ಅಧೀಕ್ಷಕರಾದ, ಲಕ್ಷಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅಮರನಾಥ ರೆಡ್ಡಿ, ಕೆಎಸ್‌ಪಿಎಸ್, ಬೆಳಗಾವಿರವರ ಮಾರ್ಗದರ್ಶನದಲ್ಲಿ  ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ  ಹಾಗೂ ಸಿಪಿಐ ಶಂಕರಗೌಡಾ ಬಸನಗೌಡರ ಅವರ ಉಸ್ತುವಾರಿಯಲ್ಲಿ ಅಥಣಿ ಪಿಎಸ್ಐ ಕುಮಾರ ಹಾಡಕಾರ ನೇತೃತ್ವದಲ್ಲಿ ಎಮ್ ಡಿ ಘೋರಿ ಪಿಎಸ್‌ಐ(ಅ,ವಿ) ಹಾಗೂ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಸ್ ಪಿ ಸವದಿ, ಎ ಎ ಈರಕರ, ಆರ್ ಆರ್ ವಾಘಮೋರೆ, ಎಸ್ ಜಿ ಮನ್ನಾಪೂರ, ಕೆ ಬಿ ಶಿರಗೂರ ಇವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಕಾಗವಾಡ ತಾಲೂಕಿನ ಕೃಷ್ಣಾಕಿತ್ತೂರ ಗ್ರಾಮದ ಪೀರಸಾಬ ರಾಜೇಸಾಬ ಕುಪವಾಡಿ (26) ಬಂಧಿಸಿ ಸುಮಾರು 1,40,000 ಕಿಮ್ಮತ್ತಿನ ಮೋಟರ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.