ಸ್ಟಾಫ್ ನರ್ಸ್ಗೆ ಗಂಭೀರ ಗಾಯ

ಬಿಜಾಪುರ ಹೊರವಲಯದಲ್ಲಿ ನಿಂತ ಲಾರಿಗೆ ಆ್ಯಂಬ್ಯುಲನ್ಸ್ ಡಿಕ್ಕಿ

0

Gummata Nagari : Bijapur News

ಬಿಜಾಪುರ : ನಗರದ ಹೊರವಲಯದ ರೇಡಿಯೋ ಕೇಂದ್ರದ ಬಳಿ ಶುಕ್ರವಾರ ಬೆಳಗಿನ ಜಾವಾ ಆ್ಯಂಬ್ಯುಲನ್ಸ್ ಅಪಘಾತವಾಗಿ ಕೊರೊನಾ ವಾರಿಯರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಿಲ್ಲೆಯ ಬಸವನ ಬಾಗೇವಾಡಿಯಿಂದ ಜಿಲ್ಲಾಸ್ಪತ್ರೆಗೆ ಗರ್ಭಿಣಿಯನ್ನು ಆ್ಯಂಬ್ಯುಲೆನ್ಸ್ ನಲ್ಲಿ ಕರೆ ತರಲಾಗುತ್ತಿತ್ತು. ರೇಡಿಯೋ ಕೇಂದ್ರದ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಆ್ಯಂಬ್ಯುಲನ್ಸ್ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದೆ.

ಅಪಘಾತದಿಂದ ಇಎಂಟಿ ಸ್ಟಾಫ್ ನರ್ಸ್ ತುಳಸಿ ತಲೆಗೆ ಗಂಭೀರ ಗಾಯವಾಗಿದೆ. ಆ್ಯಂಬ್ಯುಲನ್ಸ್ ಚಾಲಕ ಶ್ರೀಶೈಲಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಠವಶಾತ್ ಗರ್ಭಿಣಿಯು ಯಾವುದೇ ಸಮಸ್ಯೆ ಇಲ್ಲದೆ ಪಾರಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಗಂಭೀರ ಗಾಯಗೊಂಡ ಸ್ಟಾಫ್ ನರ್ಸ್ ತುಳಸಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸಿಬ್ಬಂದಿ ಆಕ್ರೋಶ: ಅಪಘಾತ ನಡೆದರೂ ಹಿರಿಯ ಅಧಿಕಾರಿಗಳು ಘಟನೆ ಸ್ಥಳಕ್ಕೆ ಬಂದಿಲ್ಲ ಮತ್ತು ಗಾಯಗೊಂಡಿರುವ ಕೊರೊನಾ ವಾರಿಯರ್ ಆರೋಗ್ಯ ವಿಚಾರಿಸಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.