ಗಾಂಜಾ ಮಾರಾಟ, ಖರೀದಿ: ಏಳು ಜನರ ಬಂಧನ

0

Gummata Nagari : Bijapur News

ಬಿಜಾಪುರ : ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಖರೀದಿ ಮಾಡುತ್ತಿದ್ದ ವಿವಿಧ ಕಡೆ ದಾಳಿ ನಡೆಸಿರುವ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆಹೇರಿ ಕ್ರಾಸ್ ಹತ್ತಿರ ಎನ್‌ಎಚ್ 50 ರಲ್ಲಿ ಗಾಂಜಾ ಮಾರಾಟ ಹಾಗೂ ಖರೀದಿ ಮಾಡುತ್ತಿದ್ದ ಕಕ್ಕಳಮೇಲಿ ಗ್ರಾಮದ ಸುರೇಶ ನಾಟೀಕಾರ, ಅಫಝಲಪೂರ ತಾಲೂಕಿನ ಬಡದಾಳ ಗ್ರಾಮದ ಮಡಿವಾಳಪ್ಪ ಪರೀಟ್, ಆಲಮೇಲ್ ಪಟ್ಟಣದ ಬಾಬು @ ಬಾಬುರಾವ್ ಲಾವಟೆ, ಬೆಂಗಳೂರು ಮೂಲದ ಶರತ, ಗಗನ ಕೆ, ಹಾಗೂ ಮನೋಜ್‌ನನ್ನು ಪೊಲಿಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಸುಮಾರು 2 ಕೆಜಿ 300 ಗ್ರಾಂ ಗಾಂಜಾ, ಹೆಚ್‌ಎಫ್ ಡಿಲೆಕ್ಸ್ ಮೋಟಾರ್ ಬೈಕ್ ಮತ್ತು ಸ್ವೀಫ್ಟ್ ಕಾರ್‌ವೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಹೊರ್ತಿ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ದೇಗಿನಾಳ ಗ್ರಾಮದಲ್ಲಿ 750 ಗ್ರಾಂ ಗಾಂಜಾವನ್ನು ಜಪ್ತ ಮಾಡಿಕೊಂಡು ಒರ್ವ ಆರೋಪಿ ರೇವಣಸಿದ್ದ ರಾಠೋಡನನ್ನು ಬಂಧಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.