ಅಪರಾಧ ಮಟ್ಟ ಹಾಕಲು ಮುಲಾಜಿಲ್ಲದೇ ಕ್ರಮ: ಕಮಿಶ್ನರ್

0

Gummata Nagari : Dharwad News

ಹುಬ್ಬಳ್ಳಿ : ಎಲ್ಲ ರೀತಿಯ ಅಪರಾಧ ಕೃತ್ಯಗಳನ್ನು ಮಟ್ಟ್ ಹಾಕಲು ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಅವಳಿ ನಗರದ ನೂತನ ಪೊಲೀಸ್ ಆಯುಕ್ತ ಲಭೂರಾಮ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಅವಳಿ ನಗರದಲ್ಲಿ ಮಟ್ಕಾ ದಂಧೆ, ಬುಕ್ಕಿಗಳು, ಬಡ್ಡಿ ವಸೂಲಿ ಕುಳಗಳು, ಅಟ್ಟಹಾಸ ಮೆರೆಯುವ ಪುಂಡರು, ಗಾಂಜಾ ಮತ್ತಿತರ ದಂಧೆಕೋರರ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದಿದ್ದಾರೆ.

ಅವಳಿ ನಗರದ ಜನತೆ ಶಾಂತಿಪ್ರಿಯರಾಗಿದ್ದಾರೆ. ಇಲ್ಲಿನ ಕಾನೂನು-ಸುವ್ಯವಸ್ಥೆ ಕೆಡದಂತೆ ಇಲಾಖೆ ಕೆಲಸ ಮಾಡಲಿದೆ. ಬೆಂಗಳೂರು ನಗರದ ಹೊರತಾಗಿ ರಾಜ್ಯದಲ್ಲಿನ ದೊಡ್ಡ ನಗರ ಅವಳಿ ನಗರವಾಗಿದೆ. ಹಲವು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಮಟ್ಕಾ ದಂಧೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆಗಳನ್ನು ಇಲ್ಲವಾಗಿಸಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು.

ಇಲಾಖೆಯ ಎಲ್ಲ ಹಿರಿ-ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುವುದು. ಎಲ್ಲ ಠಾಣೆಗಳಿಗೆ ಭೇಟಿ ನೀಡಿ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ನಮ್ಮ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಹಾಗೂ ಬಡ್ಡಿ ದಂಧೆ ನಡೆಸುವ ಕುಳಗಳ ಉಪಟಳ ಕಂಡು ಬಂದಲ್ಲಿ ಹೆಡೆಮುರಿ ಕಟ್ಟಲಾಗುವುದು. ಜೊತೆಗೆ ಕಮಿಶ್ನರೇಟ್ ವ್ಯಾಪ್ತಿಯಲ್ಲಿನ ಎಲ್ಲ ಠಾಣೆಗಳಲ್ಲಿ ಬಾಕಿ ಇರುವ ಎಲ್ಲ ಪ್ರಕರಣಗಳ ತನಿಖೆ ಚುರುಕುಗೊಳಿಸಿ ಆರೊಪಿಗಳ ಪತ್ತೆ ಮಾಡಲಾಗುವುದು ಎಂದು ಆಯುಕ್ತ ಲಾಭೂರಾಮ್ ಹೇಳಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.