ಯುವತಿಗೆ ಬೆದರಿಕೆ ಹೊಡ್ಡಿ ಅತ್ಯಾಚಾರ, ಕಾನ್‌ಸ್ಟೇಬಲ್ ಇಂದ ಹ್ಯೇಯ ಕೃತ್ಯ

ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ ಪೊಲೀಸ್ ಕಾನ್‌ಸ್ಟೆಬಲ್‌

0

ಚೆನ್ನೈ: ಯುವತಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾಗ ಚಿತ್ರಿಸಿಕೊಂಡಿದ್ದ ವಿಡಿಯೋ ತೋರಿಸಿ ನಂತರ ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಪೊಲೀಸರು ಅಮಾನತುಗೊಳಿಸಿದ್ದಾರೆ.

ಈ ಸಂಬಂಧ ಚೆನ್ನೈನ ಅಂಬತ್ತೂರು ಮೂಲದ 21 ವರ್ಷದ ಯುವತಿ ಆಗಸ್ಟ್ 28 ರಂದು ವೆಲ್ಲೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಲ್ಲಿ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡುತ್ತಿರುವ ಕಾನ್‌ಸ್ಟೆಬಲ್ ಗಣೇಶ್ ಕುಮಾರ್ ಅವರ ಬಗ್ಗೆ ಅತ್ಯಾಚಾರ ಆರೋಪ ಹೊರಿಸಲಾಗಿದೆ. ಹಾಗೂ ಫೇಸ್‌ಬುಕ್ ಮೂಲಕ ಪರಿಚಿತನಾಗಿ ತನಗೆ ಮೋಸ ಮಾಡಿದ್ದಾನೆ ಎಂದು ದೂಷಿಸಲಾಗಿದೆ.

ಮೋಡ ಮೊದಲಿಗೆ ಆದ ಇವರ ಫೇಸ್ ಬುಕ್  ಪರಿಚಯವು ಪ್ರೀತಿಯಾಗಿ ಬದಲಾಯಿತು. ಅಲ್ಲದೆ ಫೆಬ್ರವರಿಯಲ್ಲಿ ಆಕೆ ಕಾನ್‌ಸ್ಟೆಬಲ್‌ನನ್ನು ನೋಡಲು ವೆಲ್ಲೂರಿಗೆ ಬಂದಿದ್ದಳು ಎಂದು ಆಕೆಯೇ ತನ್ನ ದೂರಿನಲ್ಲಿ ಬಹಿರಂಗಪಡಿಸಿದ್ದಾಳೆ.

ವೆಲ್ಲೂರಿಗೆ ಬಂದ ಆಕೆಯನ್ನು ಕಾನ್‌ಸ್ಟೆಬಲ್‌ ಗಣೇಶ್ ಕುಮಾರ್ ತಾನು ತಂಗಿದ್ದ ಪೊಲೀಸ್ ಕ್ವಾರ್ಟರ್ಸ್ ಗೆ ಕರೆದೊಯ್ದು ಪಾನೀಯಗಳಲ್ಲಿ ಮಾದಕ ವಸ್ತು ಬೆರೆಸಿ ಆಕೆ ಮೇಲೆ ಅತ್ಯಾಚಾರಮಾಡಿದ್ದಾನೆ, ನಂತರ ಆ ವಿಡಿಯೋ ತೋರಿಸಿ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಆಕೆ ದೂರಿದ್ದಾಳೆ.

ಮುಂದೆ ಆ ಯುವತಿ ಮದುವೆಯಾಗಲು ಕೇಳಿದಾಗ, ಒಪ್ಪದ ಕಾನ್‌ಸ್ಟೆಬಲ್‌ ಇನ್ನೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾನ್‌ಸ್ಟೆಬಲ್ ಗಣೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಜೈಲು ಅಧಿಕಾರಿಗಳು ಶನಿವಾರ ಬೆಳಿಗ್ಗೆ ಆದೇಶ ಹೊರಡಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.