ಮೆಣಸಿನಕಾಯಿ ಜೊತೆ ಗಾಂಜಾ ಬೆಳೆದ ವ್ಯಕ್ತಿ ಬಂಧನ

0

Gummata Nagari

ಹುಬ್ಬಳ್ಳಿ: ಮೆಣಸಿನಕಾಯಿ ಬೆಳೆಯೊಂದಿಗೆ ಗಾಂಜಾ ಗಿಡ ಬೆಳೆದಿದ್ದ ರೈತನನ್ನು‌ ಬಂಧಿಸುವಲ್ಲಿ‌ ಕುಂದಗೋಳ ತಾಲುಕಿನ ಗುಡಿಗೇರಿ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

 

ದೇವರಹಳ್ಳದ ಶರೀಫ್‌ ಸಾಬ್ ಹುಸೇನ್‌ಸಾಬ್ ದೊಡ್ಡಮನಿ ಬಂಧಿತ ಆರೋಪಿಯಾಗಿದ್ದಾನೆ. ಈತ ಗುಡಗೇರಿ ಸಮೀಪದಲ್ಲಿ ಪಶುಪತಿಹಾಳ ಗ್ರಾಮದಲ್ಲಿ ಜಮೀನು ಹೊಂದಿದ್ದು, ತನ್ನ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯೊಂದಿಗೆ ಗಾಂಜಾ ಗಿಡ ಬೆಳೆದಿದ್ದ. ಇದರ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ, ಬಂಧಿತನಿಂದ 32 ಸಾವಿರ ಮೌಲ್ಯದ 700 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

 

ಈ ಸಂಬಂಧ ಗುಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.