ಹಣಕ್ಕಾಗಿ ಮಲ್ಲಿಕಾರ್ಜುನ ಕಾಟಗಾಂವ ಅಪಹರಣ… ಆರು ಜನರು ಅಂದರ್.. ಸಿಂದಗಿ ಪೊಲೀಸ ಠಾಣೆಯಲ್ಲಿ ದೂರು…

0

Gummata nagari : Vijaypura

ಸಿಂದಗಿ : ಹಣದ ಆಸೆಗಾಗಿ ಓರ್ವನ್ನು ಆರು ಜನರು ಸೇರಿಕೊಂಡು ಕಂಟ್ರಿ ಪಿಸ್ತೂಲ್ ಹಣೆಗಿಟ್ಟು ಅಪಹರಣಗೈದು ಐದು ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರು ಜನರನ್ನು ಬಂಧಿಸುವಲ್ಲಿ ಸಿಂದಗಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ್‌ ಮಾಹಿತಿ ನೀಡಿದ್ದಾರೆ.

ಹಣಕ್ಕಾಗಿ ಮಲ್ಲಿಕಾರ್ಜುನ ಕಾಟಗಾಂವ ಅಪಹರಣ... ಆರು ಜನರು ಅಂದರ್.. ಸಿಂದಗಿ ಪೊಲೀಸ ಠಾಣೆಯಲ್ಲಿ ದೂರು...

ರಮೇಶ ಈರಪ್ಪ ಸೊಡ್ಡಿ, ಮಹ್ಮದಲಿ ಬಸೀರಹ್ಮದ ಕಲ್ಮನಿ, ಸತೀಶ ಪರಸಪ್ಪ ಆರೇಕರ, ರಾಜು ಇಬ್ರಾಹಿಮ್ ನಧಾಪ್, ಇಸ್ಮಾಯಿಲ್ ದಾವಲಸಾಬ್ ಕೊತಂಬರಿ, ಜಮೀರ್ ದಾವಲಸಾಬ್ ಆಲಮೇಲ ಬಂಧಿತರು.

ಹಣಕ್ಕಾಗಿ ಮಲ್ಲಿಕಾರ್ಜುನ ಕಾಟಗಾಂವ ಅಪಹರಣ... ಆರು ಜನರು ಅಂದರ್.. ಸಿಂದಗಿ ಪೊಲೀಸ ಠಾಣೆಯಲ್ಲಿ ದೂರು...

ಇನ್ನು ಬಂಧಿತರು ವಿಜಯಪುರ ಜಿಲ್ಲೆಯ ದೇವಣಗಾಂವ ಹತ್ತಿರ ಮಲ್ಲಿಕಾರ್ಜುನ ಕಾಟಗಾಂವನ್ನು ಕಾರ್ ನಲ್ಲಿ ಹೋಗುತ್ತಿದ್ದಾಗ ಆರು ಜನರು ಸೇರಿಕೊಂಡು ಅಪಹರಣಗೈದು ಹಣೆಗೆ ಪಿಸ್ತೂಲ್ ನಿಟ್ಟು ಐದು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಹಣ ನೀಡದೇ ಹೋದ್ರೇ ನಿನ್ ಹಾಗೂ ನಿನ್ ಮಗನ್ನು ಹತ್ಯೆಗೈಯುವ ಬೆದರಿಕೆ ನೀಡಿದ್ರು. ಇದನ್ನು ಚಾಲೆಂಜ್ ಯಾಗಿ ತೆಗೆದುಕೊಂಡು ಸಿಂದಗಿ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.