ಮತ್ತೆ ಐವರ ಬಂಧನ

ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಪೈರಿಂಗ್ ಪ್ರಕರಣ

0

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ.ರವಿಗೌಡ ಪಾಟೀಲ ಧೂಳಖೇಡ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿಯೂ ಮಹಾದೇವ ಸಾಹುಕಾರ ಮೇಲೆ ಹಲ್ಲೆ ನಡೆಸಲು ಯೋಜನೆ ಹಾಕಿಕೊಂಡಿದ್ದರು, ಆದರೆ ಬರುವ ರೂಟ್ ಬದಲಾಗಿದ್ದರಿಂದ ಆ ವೇಳೆ ಆರೋಪಿಗಳಿಗೆ ಹಲ್ಲೆ ನಡೆಸಲು ಸಾಧ್ಯವಾಗಿಲ್ಲ ಎಂಬ ವಿಷಯ ತನಿಖೆಯಲ್ಲಿ ತಿಳಿದು ಬಂದಿದೆ.
-ಅನುಪಮ ಅಗರವಾಲ್, ಎಸ್ ಪಿ ಬಿಜಾಪುರ

ಬಿಜಾಪುರ : ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರನ್ನು ಬಂಧಿಸಿರುವ ಬಿಜಾಪುರ ಪೊಲೀಸರು, ಕಂಟ್ರಿ ಪಿಸ್ತೂಲ್ ಸೇರಿದಂತೆ ಅನೇಕ ಮಾರಕಾಸ್ತ್ರಗಳನ್ನು ಜಪ್ತು ಮಾಡಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ ಪಿ ಅನುಪಮ್ ಅಗರವಾಲ್ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಪೈರಿಂಗ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೆ ಇಬ್ಬರು ಆರೊಪಿಗಳನ್ನು ಬಂಧಿಸಲಾಗಿತ್ತು ಈಗ ಮತ್ತೆ ಐವರನ್ನು ಬಂಧಿಸಲಾಗಿದ್ದು ಇದುವರೆಗೆ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಬಂಧಿತ ಆರೋಪಿಗಳನ್ನು ಅತಾಲಟ್ಟಿ ಗ್ರಾಮದ ಯಾಶೀನ್ ದಂದರಗಿ (25), ಕರೆಪ್ಪ @ ಗೂಳಿ ಸೊನ್ನದ (25), ಸಿದ್ದರಾಯ ಬೊಮ್ಮನಜೋಗಿ (34), ಅಲಿಯಾಬಾದ ಗ್ರಾಮದ ಸಚಿನ ಮಾನವರ (28) ಹಾಗೂ ಚಡಚಣದ ರವಿ ಬಂಡಿ (20) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಹತ್ಯೆಗೆ ಬಳಿಸಿದ 2 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡು, 4 ಮೊಬೈಲ್, 1 ಆಟೋ ರಿಕ್ಷಾ, 1 ಮಚ್ಚು ವಶಕ್ಕೆ ಪಡೆಯಲಾಗಿದೆ ಎಂದರು.

ಒಂದೊಂದು ಟಾರ್ಗೆಟ್

ಬಂಧಿತ ಆರೋಪಿಗಳೆಲ್ಲರಿಗೂ ಒಂದೊಂದು ಟಾರ್ಗೆಟ್ ನೀಡಲಾಗಿತ್ತು. ಬಂಧಿತ ಆರೋಪಿ ಸಿದ್ಧೂ ಬೊಮ್ಮನಜೋಗಿಗೆ ಟಿಪ್ಪರ್‌ನಿಂದ ಇಳಿದು ಲಾಂಗ್‌ನಿಂದ ದಾಳಿ ನಡೆಸುವುದು, ಸಂಜು ಮಾನವರ ಎಂಬ ಆರೋಪಿಗೆ ಪೆಟ್ರೋಲ್ ಬಾಂಬ್ ಎಸೆಯುವ ಟಾರ್ಗೆಟ್ ಹೀಗೆ ಎಲ್ಲರಿಗೂ ಒಂದೊಂದು ರೀತಿ ದಾಳಿ ನಡೆಸುವ ಟಾರ್ಗೆಟ್ ನೀಡಲಾಗಿತ್ತು ಎಂಬ ವಿಷಯವೂ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಎಸ್.ಪಿ ವಿವರಿಸಿದರು. ಬಂಧಿತನಾಗಿರುವ ರವಿ ಬಂಡಿ ಎನ್ನುವ ಆರೋಪಿ ಧರ್ಮರಾಜ್ ಚಡಚಣ ಕಟ್ಟಾ ಅಭಿಯಾನಿಯಾಗಿದ್ದು, ಈ ಅಭಿಮಾನದಿಂದಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.