ಡ್ರಗ್ಸ್ ಪ್ರಕರಣ: ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್ ಮುಖಂಡ ಸಿಸಿಬಿ ತೆಕ್ಕೆಗೆ

0

Gummata Nagari

ಹುಬ್ಬಳ್ಳಿ: ಡ್ರಗ್ಸ್‌ ಪ್ರಕರಣ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ, ಸಿಲಿಕಾನ್ ಸಿಟಿಯಲ್ಲಿ ಕೇಳಿ ಬರುತ್ತಿರುವ ಡ್ರಗ್ಸ್ ಘಾಟು ವಾಣಿಜ್ಯನಗರಿಗೂ ವಿಸ್ತರಿಸಿದ್ದೂ ಸಿಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

 

ಬೆಂಗಳೂರಿನಲ್ಲಿ ನಡೆದಿರುವ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮಖಂಡನ ಗಿರೀಶ್ ಗದಿಗೆಪ್ಪಗೌಡರ ಎಂಬ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ನಟಿ ರಾಗಿಣಿ ಜೊತೆಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿಯ ರಾಜಕೀಯ ಮುಖಂಡನ ಭಾವಚಿತ್ರ ರಾಗಿಣಿ ಮೊಬೈಲ್‌ನಲ್ಲಿ ದೊರೆತ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

 

ಹಾಗೆಯೇ ಹುಬ್ಬಳ್ಳಿಯ ಮುಖಂಡ ನಟಿಯ ಜತೆಗೆ ಗೋವಾ ರಾಜ್ಯಕ್ಕೆ ತೆರಳಿದ್ದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.‌ ಈ ಬಗ್ಗೆ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು, ಗಿರೀಶ್ ಗದಿಗೆಪ್ಪಗೌಡರ ಅವರನ್ನು ವಶಕ್ಕೆ ಪಡೆದ ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಲಿದ್ದು. ನಟಿ ರಾಗಿಣಿ ದ್ವಿವೇದಿಗೆ ಹುಬ್ಬಳಿಯ ನಂಟಿದ್ಯಾ ? ಎಂಬುದು ತನಿಖೆಯ ನಂತರವೇ ಬಯಲಾಗಲಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.