ಸಿಡಿ ಕೇಸ್ ಗೆ ಬಿಗ್ ಟ್ವಿಸ್ಟ್

ಸಿಡಿಯಲ್ಲಿ ಇರೋದು ನಾನೇ ಎಂದು ತನಿಖೆ ವೇಳೆ ಒಪ್ಪಿಕೊಂಡ ಮಾಜಿ ಸಚಿವ ರಮೇಶ್ ಜಾರಕಿಹೊಳಿ

0

Gummata nagari : Bengalore

ಬೆಂಗಳೂರು : ಕೊರೊನಾ ಹಿನ್ನಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆತ್ಯಾಚಾರ ಕೇಸ್ ಮರೆತೇ ಹೋಗಿದೆ. ಸದ್ದಿಲ್ಲದೇ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದ ಮಾಜಿ ಸಚಿವ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.. ಇಷ್ಟು ದಿನ ಸಿಡಿ ನಕಲಿ ಅಂತಿದ್ದ ರಮೇಶ್ ಜಾರಕಿಹೊಳಿ ಈಗ ಉಲ್ಟಾ ಹೊಡೆದು ವಿಡಿಯೋದಲ್ಲಿ ಇರೋದು ನಾನೇ ಅಂತ ಒಪ್ಪಿಕೊಂಡಿದ್ದಾರೆ..

ಕೊರೊನಾ ಮದ್ಯೆ ಸದ್ದಿಲ್ಲದೆ  ಮಾಜಿ ಸಚಿವರ ಸಿಡಿ ಕೇಸ್ ತನಿಖೆ ನಡೆದಿದೆ. ಯಾರಿಗೂ ತಿಳಿಯದಂತೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿರೋ ಮಾಜಿ ಸಚಿವ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ್ದ ರೇಪ್‌ ಕೇಸ್ ರೋಚಕ ಟ್ವಿಸ್ಟ್ ಸಿಕ್ಕಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ದಿನದಿಂದಲ್ಲೂ ಸಿಡಿಯಲ್ಲಿ ಇರೋದು ನಾನ್ನಲ್ಲ ಅಂತಿದ್ರು.. ಇಷ್ಟು ದಿನ ಸಿಡಿ ನಕಲಿ , ಆ ಯುವತಿ ಯಾರು ಅಂತ ಗೊತ್ತಿಲ್ಲ ಅಂತಿದ್ದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ಪರ ವಕೀಲ ಜಗದೀಶ್ ಯುವತಿ ತನ್ನ ಕೈನಲ್ಲೇ ಬರೆದುಕೊಟ್ಟಿದ್ದ  ದೂರನ್ನು ಠಾಣೆಗೆ ತಂದು  ನೀಡಿದ್ರು.. ಈ ಹಿನ್ನಲೆ ಅನಿವಾರ್ಯವಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ರು..

ಇನ್ನು ರೇಪ್ ಕೇಸ್ ಕುತ್ತಿಗೆ ಬರೋ ಹೊತ್ತಲ್ಲಿ  ಮಾಜಿ ಸಚಿವ ರಮೇಶ್ ಜಾರಕಿಹೋಳಿ ಹೇಳಿಕೆ ನೀಡಿದ್ದಾರೆ.
ಸಿಡಿಯಲ್ಲಿರೋದು ನಾನೇ.. ಆ ಹುಡುಗಿ ಕೂಡ ನನಗೆ ಪರಿಚಯ ಎಂದು ತನಿಖಾಧಿಕಾರಿಗ ಮುಂದೆ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಮತ್ತೊಂದೆಡೆ ಮಾಜಿ ಸಚಿವ ರಮೇಶ್ ಜಾರಕಿ ಹೊಳಿಗೆ ಯುವತಿ ಹೇಗೆ ಪರಿಚಯ..ಮಂಚಕ್ಕೆ ಏರವಷ್ಟು ಕ್ಲೋಸ್ ನೇಸ್ ಹೇಗೆ ಬಂತು ಎಂಬ ಪ್ರಶ್ನೆ ಕೂಡ ಮೂಡಿತ್ತು. ಇದಕ್ಕೆ ಈಗ ರಮೇಶ್ ಜಾರಕಿಹೊಳಿ ಹೇಳಿಕೆಯಿಂದ ಸ್ಪಷ್ಟನೆ ಸಿಕ್ಕಿದೆ.  ಪ್ರಾಜೆಕ್ಟ್ ವಿಚಾರಕ್ಕೆ ಅಂತ ಯುವತಿ ನನಗೆ ಪರಿಚಯ ಮಾಡಿಕೊಂಡಿದ್ಳು ಎಂದಿರೋ ರಮೇಶ್ ಜಾರಕಿಹೊ
ಅವಳ ನನ್ನ ನಂಬರ್ ಪಡೆದು ಆಗಾಗ ಫೋನ್ ಮಾಡ್ತಿದ್ಳು. ಕೆಲ ತುರ್ತು ಸಂದರ್ಭದಲ್ಲಿ ಆಕೆಯನ್ನು ನನ್ನ ಅಪಾರ್ಟ್ ಮೆಂಟ್  ಗೆ ಕರೆಸಿಕೊಂಡಿದಾಗಿಯು ಮಾಜಿ ಸಚಿವ ಬಾಯ್ಬಿಟ್ಟಿದ್ದಾರೆ.ಯುವತಿ ನಮ್ಮ ಅಪಾರ್ಟ್ ಮೆಂಟ್ ಗೆ ಬಂದ  ವೇಳೆ ಆಕೆಯ ಸಮ್ಮತಿಯೊಂದಿಗೆ ಅವಳ ಜೊತೆ ಸೇರಿದ್ದೆ.. ನಾನು ಅತ್ಯಾಚಾರ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಾಸಲೀಲೆಯ  ವಿಡಿಯೋ ಹೇಗೆ ಮಾಡಿದ್ರು ಎಂದು ಗೊತ್ತಿಲ್ಲ.. ನಾನು ಯುವತಿಗೆ ಯಾವುದೇ ಆಮಿಷ ವೊಡ್ಡಿಲ್ಲ ಎಂದು ಮಾಜಿ ಸಚಿವ ಬೆಳಗಾವಿ ಶಾಸಕ ರಮೇಶ್ ಜಾರಕಿಹೊಳಿ  ಹೇಳಿಕೆ ನೀಡಿದ್ದಾರೆ.. ಇಷ್ಟು ದಿನೆ ನಕಲಿ ಸಿಡಿ , ಆಕೆ ಯಾರೂ ಎನ್ನುವುದೆ ಗೊತ್ತಿಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ ತನಿಖಾಧಿಕಾರಿ ಎಸಿಪಿ ಕವಿತಾ ಮುಂದೆ ತನ್ನ ಹೇಳಿಕೆ ದಾಖಲಿಸಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ರಾಸಲೀಲೆ ಕೇಸ್ ಯಾವ ತಿರುವು ಪಡೆಯುತ್ತೇ ಅನ್ನೋದು ಕಾದು ನೋಡಬೇಕಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.