ಗ್ಯಾಂಗ್ ಸ್ಟರ್ ಕಟ್ಟಿಕೊಳ್ಳಲು ಸಾಹುಕಾರ ಮೇಲೆ ಅಟ್ಯಾಕ್!!

ಮಹಾದೇವ ಸಾಹುಕಾರ ಮೇಲೆ ಫೈರಿಂಗ್ ಪ್ರಕರಣ

0

Gummata Nagari : Bijapur News

ಬಿಜಾಪುರ : ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ದೊರಕಿದ್ದು, ಮಹಾದೇವ ಸಾಹುಕಾರ ಭೈರಗೊಂಡ ಅವರಿಗೆ ಕಾರಿಗೆ ಗುದ್ದಿದ ಟಿಪ್ಪರ ಚಾಲಕ ಹಾಗೂ ಮಾಹಿತಿ ನೀಡಿದ ಆರೋಪಿಯನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಟಿಪ್ಪರ್ ಚಾಲಕ ನಾಗಪ್ಪ ಪೀರಗೊಂಡ, ಇನ್ನೂ ಮಹಾದೇವ ಸಾಹುಕಾರ ಭೈರಗೊಂಡ ಅವರ ಬಗ್ಗೆ ಮಹತ್ವದ ಮಾಹಿತಿ ನೀಡಿದ ವಿಜಯ ತಾಳಿಕೋಟೆ ಎಂದು ಗುರುತಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಅವರು, ಹಳೆಯ ದ್ವೇಷ ಹಾಗೂ ಗ್ಯಾಂಗ್‌ ಸ್ಟರ್ ಕಟ್ಟಿಕೊಳ್ಳುವ ಖಯಾಲಿಯಿಂದಾಗಿ ಈ ಕೃತ್ಯ ನಡೆದಿದೆ.

ಪ್ರಮುಖವಾಗಿ ಗ್ಯಾಂಗ್ ಕಟ್ಟಬೇಕೆಂಬ ಮೋಹದಿಂದಾಗಿ ಮಡಿವಾಳ ಹಿರೇಮಠ ಸ್ವಾಮಿ ಎನ್ನುವ ಕೇಂದ್ರ ವ್ಯಕ್ತಿ ಇದ್ದು, ಆತನು ಸಹ ಈ ಕೃತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ, ಕಳೆದ ಆರೇಳು ತಿಂಗಳುಗಳಿಂದ ಪುಣೆ ಮೊದಲಾದ ಕಡೆಗಳಲ್ಲಿ ಯುವಕರನ್ನು ಕಟ್ಟಿಕೊಂಡು, ಫೈನಾನ್ಸ್ ನಡೆಸಿ ಯುವಕರಿಗೆ ದಾರಿ ತಪ್ಪಿಸಿ ಈ ರೀತಿಯ ಗ್ಯಾಂಗ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದ ಎಂದು ವಿವರಿಸಿದರು.

ಕಾತ್ರಾಳದಲ್ಲೂ ಸ್ಕೆಚ್

ಧರ್ಮರಾಜ್ ಚಡಚಣ ಹಳೆಯ ಸಹಚರರು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದು ತನಿಖೆಯಲ್ಲಿ ತಿಳಿದು ಬಂದಿದೆ. ಕಾತ್ರಾಳ ಗ್ರಾಮದಲ್ಲಿ ನಡೆಯುವ ಸತ್ಸಂಗ ಸಂದರ್ಭದಲ್ಲಿಯೂ ಮಹಾದೇವ ಸಾಹುಕಾರ ಮೇಲೆ ದಾಳಿ ನಡೆಯುವ ಯೋಜನೆಯನ್ನು ಆರೋಪಿಗಳು ಮಾಡಿಕೊಂಡಿದ್ದರು, ಕಾರ್ಯಕ್ರಮ ರದ್ದಾದ ಕಾರಣ ಸಾಧ್ಯವಾಗಲಿಲ್ಲ, ಆ ಸತ್ಸಂಗ ಸಂದರ್ಭದಲ್ಲಿ ಕೃತ್ಯಕ್ಕೆ ಬಳಕೆಯದ ಟಿಪ್ಪರ್ ಸಂಚರಿಸಿದ್ದು ಅನೇಕರು ವಿವರಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಕೆಲವೊಬ್ಬರಿಗೆ ದುಡ್ಡು ಸಂಪಾದಿಸುವ ಇರಾದೆ, ಗ್ಯಾಂಗ್ ಸ್ಟರ್ ಆಗುವ ಇರಾದೆ, ಇನ್ನೂ ಕೆಲವು ವ್ಯಕ್ತಿಗಳ ಮೇಲೆ ಅಭಿಮಾನ ಮೋಹ ಇರುವುದು ಕಂಡು ಬಂದಿದೆ, ಕೇಂದ್ರ ವ್ಯಕ್ತಿ ಮಡಿವಾಳ ಹಿರೇಮಠ ಸ್ವಾಮಿ ಬಂಧಿತನಾದ ಮೇಲೆ ಎಲ್ಲ ವಿವರಗಳು ಲಭ್ಯವಾಗಲಿವೆ ಎಂದು ವಿವರಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.