75 ಕೆಜಿ ಗಾಂಜಾ ವಶ: ಇಬ್ಬರ ಬಂಧನ

ಪೊಲೀಸರ ಮಿಂಚಿನ ದಾಳಿ

0

Gummata Nagari : Bijapur News

ಮುದ್ದೇಬಿಹಾಳ : ತಾಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯ ಚವನಭಾವಿ ಗ್ರಾಮದ ಎರಡು ಜಮೀನುಗಳಲ್ಲಿ ಬೆಳೆದಿದ್ದ ಅಂದಾಜು 20 ಲಕ್ಷ ಮೌಲ್ಯದ 75 ಕೆಜಿ ಹಸಿ ಗಾಂಜಾವನ್ನು ತಾಳಿಕೋಟೆ ಠಾಣೆಯ ಪೊಲೀಸರು ಶನಿವಾರ ಬೆಳಗಿನ ಜಾವ ಪ್ರತ್ಯೇಕವಾಗಿ ಮಿಂಚಿನ ದಾಳಿ ನಡೆಸಿ ವಶಪಡಿಸಿಕೊಂಡಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಭೀಮಣ್ಣ ತಿಪ್ಪಣ್ಣ ತುರಡಗಿ, ಕೇಶಪ್ಪ ಯಮನಪ್ಪ ಈಳಗೇರ ಬಂಧಿಸಲ್ಪಟ್ಟ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪಿಎಸೈ ಶಿವಾಜಿ ಪವಾರ ಅವರು ತಮ್ಮ ತಂಡದ ಕೆಲ ಪೊಲೀಸರೊಂದಿಗೆ ರೈತರ ಮಾರುವೇಷದಲ್ಲಿ ಬೆಳಗಿನ ಜಾವ ಈ ಕಾರ್ಯಾಚರಣೆ ನಡೆಸಿದ್ದರು. ಎಸ್ಪಿ ಅನುಪಮ್ ಅಗ್ರವಾಲ್, ಹೆಚ್ಚುವರಿ ಎಸ್ಪಿ ಡಾ. ರಾಮ್ ಅರಸಿದ್ದಿ ಮಾರ್ಗದರ್ಶನದಲ್ಲಿ ಬಸವನ ಬಾಗೇವಾಡಿ ಡಿವೈಎಸ್ಪಿ ಈ ಶಾಂತವೀರ ದಾಳಿಯ ನೇತೃತ್ವ ವಹಿಸಿಕೊಂಡಿದ್ದರು.

ಕಾನೂನಿನ ನಿಯಮದ ಪ್ರಕಾರ ದಾಳಿ ನಡೆದ ಮೇಲೆ ಸ್ಥಳಕ್ಕೆ ತಹಶೀಲ್ದಾರ್ ಜಿ.ಎಸ್.ಮಳಗಿ ಅವರನ್ನು ಕರೆಸಿ ಪಂಚನಾಮೆ ಮಾಡಿಸಿ ಭೀಮಣ್ಣನ ಹೊಲದಲ್ಲಿ ಬೆಳೆದಿದ್ದ 55 ಕೆಜಿ ಮತ್ತು ಕೇಶಪ್ಪನ ಹೊಲದಲ್ಲಿ ಬೆಳೆದಿದ್ದ 20 ಕೆಜಿ ಹಸಿ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು.

ಈ ಕುರಿತು ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಎಸೈಗಳಾದ ಆರ್.ಎಸ್.ಭಂಗಿ, ಎ.ಎಸ್.ನಾಯ್ಕೋಡಿ, ಎಫ್.ಎಸ್.ಇಂಡಿಕರ್, ಕೆ.ಎಸ್.ಬಡಿಗೇರ, ಸಿಬ್ಬಂದಿಗಳಾದ ಬಸವರಾಜ ಬಳಕಲ್, ಬಸವರಾಜ ಗರಸಂಗಿ, ಮಲ್ಲು ಪಟ್ಟೇದ, ಶಿವನಗೌಡ ಬಿರಾದಾರ, ಸೋಮು ಲಮಾಣಿ, ಶಿವಾನಂದ ಕಾರಜೋಳ, ಶಿವು ಆಳಗೋಡಿ, ಕೆ.ಕೆ.ಹಿರಣ್ಣಿ, ಎಂ.ಪಿ.ನಾಡಗೌಡ ದಾಳಿ ನಡೆಸಿದ ತಂಡದಲ್ಲಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.