ಶರಾಡೋನ್ನಲ್ಲಿ 5 ಲಕ್ಷ ಮೌಲ್ಯದ ಅಫೀಮು ವಶ

0

Gummata Nagari : Bijapur News

ಬಿಜಾಪುರ : ಜಿಲ್ಲೆಯ ಚಡಚಣ ತಾಲೂಕಿನ ಶರಾಡೋನ್ ಗ್ರಾಮದಲ್ಲಿ 2.05 ಕೆ.ಜಿ ಅಫೀಮು ಸಾಗಿಸುತ್ತಿರುವ ಕಂಟೇನರ್ ಹಾಗೂ ಚಾಲಕನನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಬಕಾರಿ ಜಂಟಿ ಆಯುಕ್ತ ಡಾ.ವೈ.ಮಂಜುನಾಥ ಮಾತನಾಡಿ, ರಾಜಸ್ಥಾನದಿಂದ ಬೆಂಗಳೂರಿಗೆ ತೆರಳುತಿದ್ದ ಕಂಟೇನರ್ ಅನ್ನು ಚಡಚಣ ತಾಲೂಕಿನ ಶಿರಾಡೂನ್‌ನಲ್ಲಿ ದಾಳಿ ಮಾಡಿ ಸೆರೆ ಹಿಡಿದಿದ್ದು, ಸೂಮಾರು 12.05 ಕೆ.ಜಿ ತೂಕದ ಅಫೀಮು ಹಾಗೂ ಪೌಡರ್ ಸಾಗಿಸಲಾಗುತ್ತಿತ್ತು. ಸೂಮಾರು 5 ಲಕ್ಷ ಮೌಲ್ಯದ ಅಫಿಮು ಹಾಗೂ 30 ಲಕ್ಷ ಮೌಲ್ಯದ ಅಶೋಕ ಲೈಲೆಂಡ್ ಕಂಟೇನರ್ ವಶ ಪಡಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿಯಾದ ಲಾರಿ ಚಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂದರು.

ಅದರಂತೆ ಬಿಜಾಪುರ ಅಬಕಾರಿ ಆಯುಕ್ತರಾದ ಅರುಣಕುಮಾರ ಅವರ ನೇತೃತ್ವದಲ್ಲಿ ಚಡಚಣ ಶಾಖೆಯ ಅಬಕಾರಿ ಪಿಎಸ್‌ಐ ಸದಾಶಿವ ಕೋರ್ತಿ ಹಾಗೂ ಗಾರ್ಡ್ಗಳಾದ ಅಶೋಕ ಬಿರಾದಾರ ಮತ್ತು ಎ.ಎಸ್.ಗೊಣಸಗಿ ಅವರ ತಂಡ ಹಾಗೂ ಅಬಕಾರಿ ಇಲಾಖೆ ಅಧಿಕಾರಿ ಪಡಸಲಗಿ ಅವರ ಪ್ರಮುಖ ಪಾತ್ರದಿಂದಾಗಿ ಈ ಕಂಟೇನರ್ ಹಾಗೂ ಅಫೀಮು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ಆಯುಕ್ತ ಅರುಣ ಕುಮಾರ ಪ್ರಾಥಮಿಕ ತನಿಖೆಯಲ್ಲಿ ಈ ಕಂಟೇನರ್ ರಾಜಸ್ಥಾನದಿಂದ ಬೆಂಗಳೂರಿಗೆ ದ್ವೀಚಕ್ರ ವಾಹನಗಳ ಬಿಡಿಭಾಗದೊಂದಿಗೆ ಹೊರಟಿದ್ದ ಈ ಕಂಟೇನರ್‌ನಲ್ಲಿ ಅಫಿಮೂ ಸಾಗಾಟ ಮಾಡಲಾಗುತ್ತಿತ್ತು. ಈ ವಿಷಯ ತಿಳದ ಕೂಡಲೆ ನಾಕಾ ಬಂದಿಯಲ್ಲಿ ಯಶಸ್ವಿಯಾಗಿ ದಾಳಿ ಮಾಡಿ ಸೆರಿಹಿಡಿದು 12.05 ಕೆ.ಜಿ ಅಫೀಮು ಹಾಗೂ ಪೌಡರ್ ವಶಪಡಿಸಿಕೊಂಡಿದ್ದೆವೆ ಎಂದರು.

ಅಬಕಾರಿ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯ ಅನುಭವದಿಂದ ಪತ್ತೆ ಹಚ್ಚಲು ಸಹಕಾರಿಯಾಗಿದ್ದು, ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ ಅತಿ ದೊಡ್ಡ ಮೌಲ್ಯದ ಅಫೀಮು ಸಾಗಾಣಿಕೆಯನ್ನು ಪತ್ತೆ ಹಚ್ಚಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಮಾಹಿತಿಗಳು ದೊರಕಿದ್ದು, ಇನ್ನೂ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.