ಮನ ನೊಂದ ಬಾಲಕಿ ಅತ್ಮಹತ್ಯೆ

0

Gummata Nagari

ಬಿಜಾಪುರ : ತಾಯಿ ಮಗಳಿಗೆ ಟಿವಿಯಲ್ಲಿ ಬರುವ ಸಂಗೀತ ಕೇಳಬೇಡ ಎಂದು ಬುದ್ಧಿ ಮಾತು ಹೇಳಿದಕ್ಕೆ ಮನನೊಂದು ಯುವತಿ ಕಲ್ಲಿನ ಕಣಿವೆವಿರುವ ಬಾವಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಜಾಪುರ ನಗರದ ಗಾಂಧಿನಗರದಲ್ಲಿ ನಡೆದಿದೆ.

ಸ್ನೇಹಾ ನಂದಿ (17) ಮೃತ ದುರ್ದೈವಿಯಾಗಿದ್ದು, ಸ್ನೇಹಾ ತಾಯಿ ಲಕ್ಷ್ಮಿ ಟಿವಿಯಲ್ಲಿ ಬರುವ ಸಂಗೀತ ಕೇಳಬೇಡ. ವಿದ್ಯಾಭ್ಯಾಸ ಮಾಡುವಂತೆ ತಾಯಿ ಮಗಳಿಗೆ ಬುದ್ಧಿ ಮಾತು ಹೇಳಿದ್ದಾಳೆ. ಮಗಳು ಸ್ನೇಹಾ ಮನನೊಂದು ತಾಯಿ ಎದುರೇ ಓಡಿ ಹೋಗಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೈದು ಸ್ನೇಹಾ ಮೃತ ದೇಹ ಹೊರಕ್ಕೆ ತೆಗೆದಿದ್ದಾರೆ.

ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.