ಭರವಸೆಯೇ ಜೀವನವನ್ನು ಮುನ್ನಡೆಸುವ ಇಂಧನ

0

ನಾವು ನಮ್ಮ ಜೀವನದಲ್ಲಿ ಒಳ್ಳೆಯ ಆದರ್ಶಗಳನ್ನು, ತತ್ವಗಳನ್ನು ಮತ್ತು ಉದಾತ್ತವಾದ ಗುರಿಗಳನ್ನು ಹೊಂದುತ್ತಾ ಅವುಗಳನ್ನು ಅನುಸರಿಸಿಕೊಂಡು ನಡೆದರೆ ಗೆಲುವಿನ ಹಾದಿ ಸುಗಮವಾಗಿ ಅಂತಿಮವಾಗಿ ಯಶಸ್ಸನ್ನು ಪಡೆಯಬಹುದು. ಒಂದು ವೇಳೆ ಮೈಮರೆತು ನಡೆದರೆ ಸೋಲು ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಸೋಲು ಎಂದರೆ ಕೆಳಗೆ ಬೀಳುವದರಲಿಲ್ಲ, ಬಿದ್ದಂತೆ ಇರುವುದರಲ್ಲಿದೆ. ಏಳು ಸಲ ಬಿದ್ದರೇನಂತೆ ಎಂಟನೇ ಸಲ ಫಿನಿಕ್ಸ್ ಹಕ್ಕಿಯಂತೆ ಮೇಲೇಳಲೇಬೇಕು, ಅಲ್ಲೇ ಇರುತ್ತದೆ ನಮ್ಮ ಯಶಸ್ಸು ಅನ್ನುವುದು.

Gummata Nagari

ಮಲ್ಲಪ್ಪ ಸಿ.ಖೊದ್ನಾಪೂರ (ತಿಕೋಟಾ)

ರಷಿಯನ್ ತತ್ವಜ್ಞಾನಿ ಹಾಗೂ ಹೋರಾಟಗಾರ ಸ್ಟಾಲಿನ್ ರವರು ಹೇಳಿರುವಂತೆ, “ಜೀವನ-ಬದುಕು ಎಂಬುದು ನಿಮಗೆ ನೇರವಾಗಿ ಯಶಸ್ಸನ್ನು ತಂದು ಕೊಡುವುದಿಲ್ಲ. ಅದು ನಮಗೆ ಸಾಧ್ಯತೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ನಮ್ಮಲ್ಲಿರುವ ಶಕ್ತಿ-ಸಾಮರ್ಥವನ್ನು ಸಮರ್ಥವಾಗಿ ಬಳಸಿಕೊಂಡು ಅವುಗಳನ್ನು ಯಶಸ್ಸನ್ನಾಗಿ ಬದಲಾಯಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ” ಎಂದು ಹೇಳಿದ್ದಾರೆ.

ಜೀವನವೆಂಬುದು ಒಂದು ಸಾಗರವಿದ್ದಂತೆ. ಆ ಸಾಗರವನ್ನು ಈಜುವಾಗ ಹತ್ತು ಹಲವು ತೊಂದರೆ, ಸಮಸ್ಯೆ, ಮತ್ತು ಸವಾಲುಗಳು ಎದುರಾಗಬಹುದು. ಈಸಬೇಕು ಇದ್ದು ಕಯಿಸಬೇಕು ಎನ್ನುವಂತೆ, ಹೀಗೆ ಸಾಧನೆಯ ಪಯಣದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸೆಂಬ ದಡವನ್ನು ಸೇರಲೇಬೇಕು. ಜೀವನವು ನಮಗೆ ಹಲವಾರು ಅವಕಾಶಗಳನ್ನು ನೀಡುತ್ತದೆ. ಅವಕಾಶಗಳು ದೊರೆತಾಗ ನನ್ನಲ್ಲಿ ಶಕ್ತಿ-ಸಾಮರ್ಥ್ಯವಿಲ್ಲ, ನನ್ನಿಂದ ಸಾಧ್ಯವಿಲ್ಲ, ಹೇಗೆ ಮಾಡುವುದು? ಸೊತರೆ ಹೇಗೆ? ಜನಏನಂದಾರು? ಎಂಬ ನಿಷೇಧಾತ್ಮಕ ಭಾವದಿಂದ ನಾವು ಮೊದಲು ಹೊರಬರಬೇಕು. ಸಿಕ್ಕ ಅವಕಾಶಗಳನ್ನು ಎಂದಿಗೂ ಕೈ ಚೆಲ್ಲಿ ಕೂಡಬಾರದು. ಕಾರಣ ಒಮ್ಮೆ ಸಿಕ್ಕ ಅವಕಾಶಗಳೆಂದಿಗೂ ಪುನಃ ಸಿಗುವುದು ಅಪರೂಪ. ಆದ್ದರಿಂದ ನನ್ನಲ್ಲಿಅದ್ಭುತ ಶಕ್ತಿಯಿದೆ ಎಂಬ ಭರವಸೆಯಿಂದ ಸತತ ಪ್ರಯತ್ನ, ಕಠಿಣ ಪರಿಶ್ರಮ, ಅಚಲ ನಂಬಿಕೆ, ಧನಾತ್ಮಕ ಚಿಂತನೆ ಮತ್ತು ಸಾದಿಸಿಯೇ ತೀರುತ್ತೇನೆಂಬ ಆತ್ಮವಿಶ್ವಾಸವೊಂದಿದ್ದರೆ ಯಸಸ್ಸಿನ ದೇಗುಲದ ಮೆಟ್ಟಿಲುಗಳನ್ನು ಏರಲು ಸಾಧ್ಯವೆಂದು ಹೇಳಬಹುದು.

ನಾವು ಯಾವಾಗಲೂ ಒಳ್ಳೆಯ ಆಲೋಚನೆಯನ್ನೆ ಮಾಡಬೇಕು. ಹಿಡಿದ ಕಾರ್ಯವನ್ನು ನೆರವೇರಿಸುವತ್ತ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಬೇಕು. ಕೆಲವೊಮ್ಮೆ ಕೈಕೊಂಡ ಕಾರ್ಯದಲ್ಲಿ ಸಮಸ್ಯೆಗಳು ಬಂದಾಗ ನಾವು ಸೋತಿರಬಹುದು ನಿಜ. ಸೋತಾಗ ಜನ ಏನು ಅಂದಾರು? ಏನು ಅಂದುಕೊಳ್ಳುತ್ತಾರೆ? ಅಥವಾ ಅಪಹಾಸ್ಯ, ಟೀಕೆ, ಹಿಯಾಳಿಕೆ, ತೆಗಳಿಕೆಗಳಂತಹ ಸನ್ನಿವೇಶಗಳು ಬಂದಾಗ ಕಿಂಚಿತ್ತೂ ಧೃತಿಗೆಡದೇ, ಅಧೈರ್ಯಿಯಾಗದೇ ಆ ಸೋಲಿನಿಂದ ಕಲಿತ ಪಾಠ-ಅನುಭವಗಳಿಂದ ಎಚ್ಚೆತ್ತುಕೊಂಡು ಮುಂದೆ ಎಚ್ಚರಿಕೆಯ ನಡೆಯಿಟ್ಟು ಸಾಗಿದಾಗ ಖಂಡಿತವಾಗಿಯೂ ಜಯವೆಂಬುದು ದೊರೆಯುತ್ತದೆ. ಅದಕ್ಕಂತಲೇ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರು “ಸೋಲಿನಿಂದ ಕಲಿತ ಪಾಠ-ಅನುಭವವೇ ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ನೀವು ಉಸಿರಾಡುವವರೆಗೂ ಕಲಿಕೆ ಮತ್ತು ಜ್ಞಾನಾರ್ಜನೆಯೇ ನಿಮ್ಮ ಜೀವನದ ಗುರಿಯಾಗಲಿ”ಎಂದು ಹೇಳಿದ್ದಾರೆ.

ಸುಪ್ರಸಿದ್ಧ ವಿಜ್ಞಾನಿ ಸರ್ ಥಾಮಸ್ ಅಲ್ವಾ ಎಡಿಸನ್‌ರವರು ತಾವು ಕೈಕೊಂಡ ಸಂಶೋಧನೆಯಲ್ಲಿ ಸಾವಿರಾರು ಬಾರಿ ವಿಫಲರಾದರು. ಆದರೆ ತಮ್ಮಲ್ಲಿರುವ ಸಹನೆ, ತಾಳ್ಮೆ, ಕಂಡುಹಿಡಿಯಬೇಕೆAಬ ತುಡಿತ, ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ಹಿಡಿದ ಕಾರ್ಯವನ್ನು ಸಾಧಿಸಿಯೇ ತೀರುತ್ತೇನೆಂಬ ಆತ್ಮವಿಶ್ವಾಸ ಮತ್ತು ಭರವಸೆಗಳಿಂದ ಅನೇಕ ಪ್ರಯೋಗಗಳ ಮೇಲೆ ಪ್ರಯೋಗಗಳನ್ನು ಮಾಡಿಕೊನೆಗೊಂದು ದಿನ ‘ವಿದ್ಯುತ್ ಬಲ್ಬ’ನ್ನು ಈ ಜಗತ್ತಿಗೆ ಪರಿಚಯಿಸಿದರು. ಇದರಿಂದ ನಮಗೆ ಅರಿತುಕೊಳ್ಳಬೇಕಾಗಿರುವುದು ಏನೇಂದರೆ ನಾವು ನಮ್ಮ ಜೀವನದಲ್ಲಿ ಒಳ್ಳೆಯ ಆದರ್ಶಗಳನ್ನು, ತತ್ವಗಳನ್ನು ಮತ್ತು ಉದಾತ್ತವಾದ ಗುರಿಗಳನ್ನು ಹೊಂದುತ್ತಾ ಅವುಗಳನ್ನು ಅನುಸರಿಸಿಕೊಂಡು ನಡೆದರೆ ಗೆಲುವಿನ ಹಾದಿ ಸುಗಮವಾಗಿ ಅಂತಿಮವಾಗಿ ಯಶಸ್ಸನ್ನು ಪಡೆಯಬಹುದು. ಒಂದು ವೇಳೆ ಮೈಮರೆತು ನಡೆದರೆ ಸೋಲು ನಮ್ಮನ್ನು ಹಿಂಬಾಲಿಸಿಕೊAಡು ಬರುತ್ತದೆ. ಸೋಲು ಎಂದರೆ ಕೆಳಗೆ ಬೀಳುವದರಲಿಲ್ಲ, ಬಿದ್ದಂತೆ ಇರುವುದರಲ್ಲಿದೆ. ಏಳು ಸಲ ಬಿದ್ದರೇನಂತೆ ಎಂಟನೇ ಸಲ ಫಿನಿಕ್ಸ್ ಹಕ್ಕಿಯಂತೆ ಮೇಲೇಳಲೇಬೇಕು, ಅಲ್ಲೇ ಇರುತ್ತದೆ ನಮ್ಮ ಯಶಸ್ಸು ಅನ್ನುವುದು.

ಒಬ್ಬ ಹುಡುಗಿ ಕೇವಲ 6 ವರ್ಷದವಳಿದ್ದಾಗ ಪೋಲಿಯೊದಿಂದ ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ವೈದ್ಯರೂ ಈಕೆಗೆ ಇನ್ನು ಮುಂದೆ ನಡೆಯಲು ಸಾಧ್ಯವೇ ಇಲ್ಲವೆಂದರೂ ಆಕೆ ತನ್ನ ಹಠ ಮತ್ತು ಏನೇ ಆಗಲಿ ಸಾಧಿಸಿಯೇ ತೀರುತ್ತೇನೆಂಬ ಛಲಗಾರಿಕೆಯಿಂದ ಕೃತಕ ಕಾಲು ಹಾಕಿಸಿಕೊಂಡು ಸತತ ಪ್ರಯತ್ನ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಗಳೆಂಬ ಯಸಸ್ಸಿನ ಮಂತ್ರವನ್ನು ಜಪಿಸುತ್ತಾ ಕೊನೆಗೊಮ್ಮೆ ಸರ್ವಶ್ರೇಷ್ಠ ಕ್ರೀಡೆ ಓಲಂಪಿಕ್‌ನಲ್ಲಿ ಮೂರು ಬಾರಿ ಚಿನ್ನದ ಪದಕಗಳನ್ನು ಪಡೆಯುವುದರ ಮೂಲಕ ನನಸು ಮಾಡಿ ಜಗತ್ತಿನಲ್ಲಿಯೇ ಹೆಸರು ಮಾಡಿದಳು. ಹೀಗೆ ತನ್ನಲ್ಲಿರುವ ಭರವಸೆ ಮತ್ತು ಸಾಧಿಸಿಯೇ ತೀರುತ್ತೇನೆಂಬ ಆತ್ಮವಿಶ್ವಾಸದಿಂದ ಹೊತ್ತು ಅಮೋಘ ಸಾಧನೆಗೈದವಳು ಉಲ್ಮಾರುಢಾಲ್ಫ್ ಎಂಬ ದಿಟ್ಟ ಹುಡುಗಿಯೇ ಇದಕ್ಕೆ ಉತ್ತಮ ನಿದರ್ಶನ. ಆದ್ದಿಂದ ಅದು ನನಗೆ ಸಾಧ್ಯವಿಲ್ಲ, ಕೈಲಾಗದು ಮತ್ತು ಕಠಿಣವಾಗಿದೆ ಎಂಬಂತಹ ನಕಾರಾತ್ಮಕ ಭಾವದಿಂದ ಹೊರಬಂದು ನಮ್ಮಲ್ಲಿರುವ ಶಕ್ತಿ-ಸಾಮರ್ಥ್ಯ, ಜ್ಞಾನ, ಪ್ರತಿಭೆ, ಯುಕ್ತತೆ ಮತ್ತು ಕೌಶಲ್ಯಗಳಿಂದ ಅಸಾಧ್ಯವಾದುದು ಯಾವುದು ಇಲ್ಲವೆಂಬುದನ್ನು ಅರಿತು ಕಾರ್ಯಪ್ರವೃತ್ತರಾದೆ ಎಲ್ಲವು ಸಾಧ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕೊನೆಯ ನುಡಿ: ಗೌತಮಬುದ್ಧ ಅನುಭವದ ಸಾರದಂತೆ “ಇಂದಿನ ನಮ್ಮ ಸ್ಥಿತಿಗೆ ನಿನ್ನೆ ಇದ್ದ ನಮ್ಮ ಮನೋಭಾವ ಅಥವಾ ಮನೋಧೋರಣೆಗಳೇ ಕಾರಣ. ಅದರಂತೆ ನಾಳೆ ನಾವು ಏನಾಗಬೇಕು ಅಂದುಕೊಂಡಿರುತ್ತೇವೆಯೋ ಅಥವಾ ಬಯಸುತ್ತೇವೆಯೋ ಅದು ನಮ್ಮ ಮನೋಧರ್ಮದ ಬಗ್ಗೆ ಇಂದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಹೇಳಿದ್ದಾರೆ. ಆದ್ದರಿಂದ ನಾವು ಯಸಸ್ಸಿಗೆ ಸುಲಭದಾರಿಗಳಿಲ್ಲವೆಂಬುದನ್ನು ಅರಿತು ಅದಕ್ಕೆ ನಿರ್ಧಿಷ್ಟವಾದ ಗುರಿಯ ಸಾಧನೆಗೆ ಅತಿ ಅಗತ್ಯವಾದ ಸಮಷಿತ್ತ, ತಾಳ್ಮೆ, ನಮ್ಮ ಮೇಲಿನ ದೃಢ ನಂಬಿಕೆ, ನಿರಂತರ ಶ್ರಮ, ಹಿಡಿದ ಕಾರ್ಯವನ್ನು ಪೂರ್ಣಗೊಳಿಸುವವರೆಗೆ ವಿರಮಿಸದೇ ಸತತ ಪ್ರಯತ್ನ, ದಿಟ್ಟಛಲ, ಮತ್ತು ಆತ್ಮವಿಶ್ವಾಸಗಳಿಂದ ಹೋರಾಡಿದರೆ ಯಶಸ್ಸು ಲಭಿಸುತ್ತದೆ. ಆದರೆ ನಮಗೆ ದೇವರು ಎಲ್ಲವನ್ನು ದಯಪಾಲಿಸಿದರೂ ಇದಿಲ್ಲ, ಅದಿಲ್ಲ, ಇದು ನಮ್ಮಂಥವರಿಗಲ್ಲ, ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ, ನಾವು ಕನ್ನಡ ಮಾಧ್ಯಮದಲ್ಲಿ ಓದಿದವರು ಮತ್ತು ಗ್ರಾಮೀಣ ಭಾಗದವರೆಂಬ ಸದಾಕುಂಟು ನೆಪವನ್ನು ಹೇಳುವದನ್ನು ಬಿಟ್ಟು ಋಣಾತ್ಮಕ ಮನೋಭಾವದಿಂದ ಹೊರಬಂದು ಪ್ರಾಮಾಣಿಕವಾಗಿ ಪ್ರಯತ್ನಶೀಲರಾದರೆ ನಮಗೂ ಆ ಅವಕಾಶಗಳು ಯಶಸ್ಸನ್ನು ತರಬಲ್ಲವು.

ಅದಕ್ಕಾಗಿ ನಾವು ಪ್ರತಿಕಷ್ಟದ ಹಿಂದೆ ಒಳ್ಳೆಯದು ಇದ್ದೇ ಇರುತ್ತದೆ. ಸೋಲುಗಳ ಹಿಂದೆಯೂ ಸಹ ಗೆಲುವೆಂಬುದ ಅಡಗಿರುತ್ತದೆ ಎಂಬುದನ್ನು ಅರಿಯಬೇಕು. ಹೀಗೆ ಪ್ರತಿಕಂಡ ಸೋಲಿನಿಂದ ಅಥವಾ ಪ್ರಯತ್ನದಿಂದ ನಾವು ಕಲಿತ ಪಾಠ ಮತ್ತು ಪಡೆದ ಅನುಭವ ಮತ್ತು ಹೊಸತನವನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆದರೆ ಈ ಪ್ರಪಂಚದಲ್ಲಿ ಯಾವ ಶಕ್ತಿಯೂ ನಮ್ಮನ್ನು ತಡೆಯಲಾರದು ಮತ್ತು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ನಾವೇ ಎಂಬುದನ್ನು ಮರೆಯಬಾರದು. ಅಂದಾಗ ಸೋಲನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.