ಹೆಣ ಸುಡಲು ಹೆಣಗಾಟ : ಸ್ಮಶಾನದಲ್ಲೂ ಕ್ಯೂ

0

Gummata Nagari : Bengalore

ಬೆಂಗಳೂರು: ರಕ್ಕಸ ಕೊರೊನಾ ಇನ್ನು ಅದೆಷ್ಟು ಜನರ ಜೀವ ಬಲಿ ಪಡೆಯುತ್ತದೆಯೋ ಗೊತ್ತಿಲ್ಲ. ಕಳೆದ ವರ್ಷ ಇದೇ ಸಂದರ್ಭದಲ್ಲಿ ವಿಶ್ವವನ್ನೇ ಸ್ತಬ್ಧ ಮಾಡಿದ್ದ ಸೋಂಕು ಮತ್ತೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ.

ಸದ್ಯ ರಾಜ್ಯ ರಾಜಧಾನಿಯಲ್ಲಿ ಕೋವಿಡ್ ಕಾಟ ಹೆಚ್ಚಾಗುತ್ತಿದೆ ಸಾವಿನ ಸರದಿಯು ಹೆಚ್ಚುತ್ತಿದೆ. ಇದರಿಂದ ಸತ್ತವರಿಗೆ ಅಂತ್ಯಸಂಸ್ಕಾರ ಮಾಡಲು ಸ್ಮಶಾನದಲ್ಲಿ ಜಾಗವಿಲ್ಲದ್ದಂತ್ತಾಗಿದೆ.

ಹೌದು ಕೋವಿಡ್-19 ಎರಡನೇ ಅಲೆ ಮೊದಲ ಬಾರಿಗಿಂತ ಭೀಕರವಾಗಿದ್ದು, ಶವಸಂಸ್ಕಾರಕ್ಕೆ ಬಿಡುವಿಲ್ಲದಂತೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗತೊಡಗಿದೆ. ಇದರಿಂದಾಗಿ ಸ್ಮಶಾನದಲ್ಲಿ ಕ್ಯೂ ನಿಂತು ಅಂತ್ಯಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಬೆಂಗಳೂರಿನ ಚಿತಗಾರದ ಮುಂದೆ, ಸಾವನ್ನಪ್ಪಿದವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ ಡೆಡ್ಲಿ ಸೋಂಕಿನಿಂದ ಸಾವನಪ್ಪಿರುವುದರಿಂದ ಕೆಲವು ಮನೆಯವರು ಪೂಜೆ ಮಾಡಲು ಮುಂದಾಗದಿರುವ ದೃಶ್ಯಗಳು ಕಂಡುಬರುತ್ತಿವೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.