18 ಜನಜೀವ ಉಳಿಸಿದ ಇನ್ಸ್ ಪೆಕ್ಟರ್ ಕೆ.ಪಿ.ಸತ್ಯನಾರಾಯಣ್..

0

Gummata nagari : bengalore

ಬೆಂಗಳೂರು :  ಆ ಆಸ್ಪತ್ರೆಯಲ್ಲಿ 20 ಕ್ಕೂ ಹೆಚ್ಚು ರೋಗಿಗಳು ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಮಧ್ಯರಾತ್ರಿ ಆಕ್ಸಿಜನ್ ಕೊರತೆ ಎದುರಾಗಿದ್ದು ,ಒಬ್ಬರೋಗಿ ಆಗಲೇ ಸಾವಿನ ಮನೆ ಸೇರಿದ್ದರು.ಆಕ್ಸಿಜನ್ ಗಾಗಿ ಪ್ರಯತ್ನಿಸಿ ಸೋತ ಆಸ್ಪತ್ರೆ ಸಿಬ್ಬಂದಿ ಎಲ್ಲೂ ಆಕ್ಸಿಜನ್ ಸಿಗದೇ ಹೋದಾಗ ಕೊನೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮೊರೆ ಹೋದರು .

ರೋಗಿಗಳ ಜೀವ ಕಾಪಾಡಲು ಸನ್ನದ್ಧರಾದ ಇನ್ಸ್ ಪೆಕ್ಟರ್ ಕೊನೆಗೂ ಬಾಲಿವುಡ್ ನಟನ ನೆರವಿನಿಂದ 18 ಮಂದಿ ಪ್ರಾಣ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ..ಯಲಹಂಕ ನ್ಯೂ ಟೌನ್ ನಲ್ಲಿರುವ ಅರ್ಕಾ ಹಾಸ್ಪಿಟಲ್ ನಲ್ಲಿ ನೆನ್ನೆ ಮಧ್ಯರಾತ್ರಿ 12.30 ಕ್ಕೆ ಆಕ್ಸಿಜನ್ ಖಾಲಿಯಾಯ್ತು. ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡ್ತಿದ್ರು. ಆಗ ಯಲಹಂಕ ನ್ಯೂ ಟೌನ್ ಪೊಲೀಸ್ ಸ್ಟೇಷನ್ ನ ಇನ್ಸ್ ಪೆಕ್ಟರ್ ಆದ  ಸತ್ಯನಾರಾಯಣ್  ರವರು, ನಟ “ಸೋನು ಸೂದ್ ಚಾರಿಟಬಲ್ ಟ್ರಸ್ಟ್” ಸದಸ್ಯರಿಗೆ ಕರೆ ಮಾಡಿ  ಕೂಡಲೇ ಸದಸ್ಯರು ತಡರಾತ್ರಿ 01.30 ಕ್ಕೆ ಬೈಕ್ ಹಾಗೂ ಕಾರುಗಳಲ್ಲಿ 11 ಆಕ್ಸಿಜನ್ ಸಿಲಿಂಡರ್ ಒದಗಿಸಿ ಎಲ್ಲರ ಜೀವ ಉಳಿಸಿದ್ದಾರೆ. ಈ ನಮ್ಮ ಕೊರೋನಾ ವಾರಿಯರ್ಸ್ ನ ಮಾನವೀಯತೆ ಗೆ ನನ್ನದ್ದೂಂದು ನಮನ .

 

 

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.