ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅವರೊಂದಿಗೆ ಡಿಸಿಎಂ ಕಾರಜೋಳ ಸಮಾಲೋಚನೆ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ

0

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಪೂರ್ವಸಿದ್ದತೆ ಕೈಗೊಳ್ಳುವ ಬಗ್ಗೆ ಶಿಕ್ಷಣ ತಜ್ಞ ಹಾಗೂ ಕ್ರೈಸ್ ಸಲಹೆಗಾರರಾದ ಡಾ. ಗುರುರಾಜ್ ಕರಜಗಿ ಅವರೊಂದಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಸುಧೀರ್ಘವಾಗಿ ಚರ್ಚಿಸಿದರು.

Gummata Nagari 

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಪೂರ್ವಸಿದ್ದತೆ ಕೈಗೊಳ್ಳುವ ಬಗ್ಗೆ ಶಿಕ್ಷಣ ತಜ್ಞ ಹಾಗೂ ಕ್ರೈಸ್ ಸಲಹೆಗಾರರಾದ ಡಾ. ಗುರುರಾಜ್ ಕರಜಗಿ ಅವರೊಂದಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಸುಧೀರ್ಘವಾಗಿ ಚರ್ಚಿಸಿದರು.
ವಿಧಾನಸೌಧದಲ್ಲಿ ಸೋಮವಾರ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಯುವ ಪೀಳಿಗೆ ಅನುಗುಣವಾಗಿದ್ದು, ಇದನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಬೇಕು. ಇದಕ್ಕೆ ಪೂರಕವಾಗಿ ಸಿದ್ದತೆ ಮಾಡಿಕೊಂಡು ವಿದ್ಯಾರ್ಥಿಗಳು ಶೇ.100ರಷ್ಟು ಅತ್ಯುತ್ತಮ ಫಲಿತಾಂಶ ಪಡೆಯವಂತೆ ಕ್ರಮಜರುಗಿಸಬೇಕು. ಅಗತ್ಯ ಇರುವ ಶಿಕ್ಷಕರು, ಪ್ರಾಂಶುಪಾಲರು, ಶುಶ್ರೂಷಕರಿಗೆ ತರಬೇತಿ ನೀಡಬೇಕು. ಕ್ರೈಸ್ ನಲ್ಲಿ ಶೈಕ್ಷಣಿಕ ಘಟಕವನ್ನು ಪ್ರಾರಂಭಿಸಲು ಕ್ರಮ ಕೈಗೊಳಗಳಲಾಗಿದೆ. ಈ ಘಟಕದ ಅಡಿಯಲ್ಲಿ ಲರ್ನಿಂಗ್ ಪ್ಯಾಕ್ ಗಳನ್ನು ಸಿದ್ದಪಡಿಸಲಾಗುವುದು.ಈಘಟಕಕ್ಕೆ ಬೇಕಾಗಿರುವ ಅಧಿಕಾರಿಗಳನ್ನು ನಿಯೋಜಿಸಿಕೊಂಡು ಕಾರ್ಯೋನ್ಮುಖವಾಗಬೇಕು. ಆನ್‌ಲೈನ್ ಮೂಲಕ ವಿವಿಧ ತರಗತಿಗಳ ನಿರ್ವಹಣೆ ಮಾಡಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಶಿಕ್ಷಕರ ಪ್ರಗತಿಯನ್ನು ಟ್ರ‍್ಯಾಕ್ ಮಾಡುವ ಸಲುವಾಗಿ ಸೂಕ್ತತಂತ್ರಜ್ಣನದ ಬಳಕೆಮಾಡಲಾಗುವುದು. ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸುವ ದೆಸೆಯಲ್ಲಿ ವಿವಿಧ ತರಗತಿಗಳನ್ನು ಪ್ರಾರಂಭಿಸಲಾಗುವುದು. ಮಕ್ಕಳ ಕಲಿಕೆಯನ್ನು ಸಂಪನ್ನ ಗೊಳಿಸಲು ಪ್ರತಿ ವಿದ್ಯಾರ್ಥಿಯ ಕಲಿಕೆಯ ಗತಿಯನ್ನು ಅರಿತು ನಿರ್ದಿಷ್ಟ ಶೈಕ್ಷಣಿಕ ಒತ್ತಾಸೆ ನೀಡಲು ಅಗತ್ಯ ಕ್ರಮ, ಮೇಲ್ವಿಚಾರಣೆ ತಂತ್ರAಶವನ್ನು ಪರಿಶೀಲಿಸಿ ಉನ್ನತೀಕರಣ, ಶಿಕ್ಷಕರ ಕಾರ್ಯ ಕ್ಷಮತೆ ಗುರುತಿಸಿ ಪ್ರೋತ್ಸಾಹಿಸುವಿಕೆ ಮತ್ತಿತರ ವಿಷಯಗಳ ಕುರಿತು ಯೋಜಿಸಿ ಕ್ರಮಜರುಗಿಸಬೇಕು ಎಂದು ಡಿಸಿಎಂ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಿದರು.
ಡಾ.ಗುರುರಾಜ್ ಕರಜಗಿ ಮಾತನಾಡಿ, ವಸತಿಶಾಲೆಗಳ ಪ್ರಾಂಶುಪಾಲರೊAದಿಗೆ ಸಭೆ ನಡೆಸಿ, ಅವರ ಅಭಿಪ್ರಾಯ ಸಂಗ್ರಹಿಸಿ, ಸೂಕ್ತ ಸಲಹೆ ಸೂಚನೆ ನೀಡಲಾಗಿದೆ. ವಸತಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ್, ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.