ಮುಂದುವರೆದ ಮುಷ್ಕರ, ಪ್ರಯಾಣಿಕರು ಹೈರಾಣ

0

Gummata nagari ; bengalore

ಬೆಂಗಳೂರು: ಆರನೇ ವೇತನ ಆಯೋಗ ಶಿಫಾರಸ್ಸು ವಿಚಾರದಲ್ಲಿ ಸರಕಾರ ಮತ್ತು ಸಾರಿಗೆ ನೌಕರರ ಸಂಘಟನೆ “ನಾ ಕೊಡೆ, ನೀ ಬಿಡೆ…’ ಎನ್ನುವ ಗುದ್ದಾಟದಲ್ಲಿ, ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ಇಂದು ಮುಷ್ಕರಕ್ಕೆ ಎರಡನೇ ದಿನ ಇಂದೂ ಕೂಡ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳು ರಸ್ತೆಗೆ ಇಳಿಯದ ಬಿಕೋ ಎನ್ನುತ್ತಿವೆ.

ಇತ್ತ ಖಾಸಗಿ ಬಸ್ ಗಳನ್ನು ಓಡಿಸುವ ಸರ್ಕಾರದ ತಂತ್ರ ವಿಫಲವಾಗಿದೆ. ಖಾಸಗಿ ಬಸ್ ಗಳಿಂದ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದ್ದು, ಖಾಸಗಿ ಬಸ್ ಗಳಿಗಾಗಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಎದುರಾಗಿದೆ. ಸೀಟು ಭರ್ತಿ ಆಗದೇ ಖಾಸಗಿ ಬಸ್ ನವರು ಗಾಡಿ ಆರಂಭಿಸಲ್ಲ. ಹೀಗಾಗಿ ನಿಗದಿತ ಸಮಯಕ್ಕೆ ತಲುಪಲಾಗದೇ ಪ್ರಯಾಣಿಕರು ಪರದಾಡುತ್ತಿದ್ದು, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬಸ್ ಮುಷ್ಕರವನ್ನು ತಾತ್ಕಾಲಿಕವಾದರೂ ಶಮನ ಮಾಡುವ ಮನಸ್ಸು ಇದ್ದಂತಿಲ್ಲ. ಅದರ ಬದಲಿಗೆ ಸರ್ಕಾರವೇ ಜಿದ್ದಿಗೆ ಬಿದ್ದಂತೆ ಕಾಣುತ್ತಿದೆ. ಮುಷ್ಕರ ಕೈಬಿಟ್ಟಿಲ್ಲ ಅಂದ್ರೆ ಸಂಬಳ ಸರಿಯಾಗಿ ಸಿಗಲ್ಲ, ಕಠಿಣವಾದ ಕಾನೂನು ಕ್ರಮಕೈಗೊಳ್ಳುತ್ತೇವೆ. ಇಂದು ಮಧ್ಯಾಹ್ನ ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತೇವೆ. ಆದರೆ ಆರನೇ ವೇತನ ಆಯೋಗದ ಶಿಫಾರಸು ಅನ್ವಯಿಸಿ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಕಡ್ಡಿಮುರಿದಂತೆ ಹೇಳಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.