ಉಮರ್ ಖಾಲಿದ್ ಬಂಧನಕ್ಕೆ ಖಂಡನೆ

0

ಗಲಭೆಯನ್ನು ಹುಟ್ಟಿಹಾಕಿದ ಕಪಿಲ್ ಮಿಶ್ರ ವಿರುದ್ಧ ದಿಲ್ಲಿ ಪೊಲೀಸ್ ಈವರೆಗೆ ಕ್ರಮ ಜರುಗಿಸಿಲ್ಲ ಬದಲಾಗಿ ಶಾಂತಿಯುತವಾಗಿ ಪ್ರತಿಭಟಿಸಿದ ಪ್ರತಿಭಟನಾಕಾರರನ್ನು ಬೇಟೆ ಮಾಡಲಾಗುತ್ತಿದೆ
-ಅಡ್ವಕೇಟ್ ತಾಹಿರ್ ಹುಸೇನ್

Gummata Nagari

ಬೆಂಗಳೂರು : ವಿದ್ಯಾರ್ಥಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ರವರ ಬಂಧನಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ತೀವ್ರವಾಗಿ ಖಂಡಿಸಿದ್ದಾರೆ.

ಉಮರ್ ಖಾಲಿದ್ ಬಂಧನವು ದೇಶದ ಜಾತ್ಯಾತೀತೆಯ ಮೇಲೆ ಮತ್ತೊಂದು ಕಳಂಕವಾಗಿದೆ. ಕೇಂದ್ರ ಸರ್ಕಾರ ಅಭಿಪ್ರಾಯ ಭೇದ ಹಾಗೂ ಮುಕ್ತ ವಿಚಾರಗಳ ಬೇಟೆ ನಡೆಸುತ್ತಿದೆ. ಆ ಮೂಲಕ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಮಾಯಕ ಜನರನ್ನು ಮತ್ತು ವಿದ್ಯಾರ್ಥಿ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ತಾಹಿರ್ ಹುಸೇನ್ ಆರೋಪಿಸಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟಿಸುವುದು ಜನರ ಮತ್ತು ವಿದ್ಯಾರ್ಥಿ ಕಾರ್ಯಕರ್ತರ ಪ್ರಜಾಪ್ರಭುತ್ವದ ಹಕ್ಕು ಎಂಬುದನ್ನು ಸರ್ಕಾರ ಮರೆಯಬಾರದು.

ಪ್ರಮುಖವಾಗಿ ಗಲಭೆಯನ್ನು ಹುಟ್ಟಿಹಾಕಿದ ಕಪಿಲ್ ಮಿಶ್ರ ವಿರುದ್ಧ ದಿಲ್ಲಿ ಪೊಲೀಸ್ ಈವರೆಗೆ ಕ್ರಮ ಜರುಗಿಸಿಲ್ಲ ಬದಲಾಗಿ ಶಾಂತಿಯುತವಾಗಿ ಪ್ರತಿಭಟಿಸಿದ ಪ್ರತಿಭಟನಾಕಾರರನ್ನು ಬೇಟೆ ಮಾಡಲಾಗುತ್ತಿದೆ ಸಿಎಎ ವಿರೋಧ ಹೋರಾಟಗಾರರಿಗೆ ಗಲಭೆ ಸಂಚು ಹಣೆದರದ ಬಿಂಬಿಸಲು ಪೊಲೀಸರು ಯತ್ನಿಸಿದ್ದಾರೆ. ಉಮರ್ ಖಾಲಿದ್ ಸೇರಿದಂತೆ ಎಲ್ಲಾ ಅಮಾಯಕ ಕಾರ್ಯಕರ್ತರನ್ನು ಬೇಷರತ್ತಾಗಿ ಮತ್ತು ನಷ್ಟ ಪರಿಹಾರದೊಂದಿಗೆ ತಕ್ಷಣ ಬಿಡುಗಡೆ ಮಾಡಬೇಕೆಂದು ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಮತ್ತವರ ರಾಜಕೀಯ ನೇತಾರರನ್ನು  ಹೊಣೆಗಾರರನ್ನಾಗಿ ಮಾಡಬೇಕು ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಸರ್ಕಾರವನ್ನು ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.