ಈರುಳ್ಳಿಗೆ ರೋಗ ರೈತರು ಕಂಗಾಲು

ಕೈಗೆ ಬರುವ ಮುಂಚೆ ರೋಗಕ್ಕೆ ತುತ್ತಾದ ಈರುಳ್ಳಿ

0

ಮುಧೋಳ ತಾಲೂಕಿನ ಮೆಟಗುಡ್ಡ. ನಿಂಗಾಪುರ. ಗುಲಗಾಲ ಜಂಬಗಿ. ಹಲಕಿ. ಬೊಮ್ಮನ ಬುದ್ನಿ. ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆ ಹೆಚ್ಚಾಗಿ ಬಿಸಿಲು ಕಾಣದೇ ಮೋಡ ಕವಿದ ವಾತಾವರಣ ಕ್ಕೆ ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ರೈತರ ಹೊಲದಲ್ಲಿ ಬೆಳೆದ ಈರುಳ್ಳಿ ಬೆಳೆ ಹಳದಿ ರೋಗಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿದೆ

ಲೋಕಾಪುರ: ಕಳೆದ ವರ್ಷ ಪ್ರವಾಹ ದಿಂದ ನಲುಗಿದ ರೈತ ಪ್ರಸಕ್ತ ವರ್ಷ ಕೋವಿಡ ಗೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವಾಗಲೇ ಈರುಳ್ಳಿ ಬೆಳೆ ಕೈಗೆ ಬರುವ ಮುಂಚೆ ರೋಗಕ್ಕೆ ತುತ್ತಾಗಿ ಮುಗುಚಿ ಬೀಳುವ ಮೂಲಕ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.
ಮುಧೋಳ ತಾಲೂಕಿನ ಮೆಟಗುಡ್ಡ. ನಿಂಗಾಪುರ. ಗುಲಗಾಲ ಜಂಬಗಿ. ಹಲಕಿ. ಬೊಮ್ಮನ ಬುದ್ನಿ. ಸೇರಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆ ಹೆಚ್ಚಾಗಿ ಬಿಸಿಲು ಕಾಣದೇ ಮೋಡ ಕವಿದ ವಾತಾವರಣ ಕ್ಕೆ ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ರೈತರ ಹೊಲದಲ್ಲಿ ಬೆಳೆದ ಈರುಳ್ಳಿ ಬೆಳೆ ಹಳದಿ ರೋಗಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿದೆ.
ಈ ಭಾಗದ
ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಬಹುತೇಕ ರೈತರು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಈರುಳ್ಳಿ ಬಿತ್ತನೆ ಮಾಡಿ ಬೆಳೆಗಾಗಿ ಸಾಕಷ್ಟು ಶ್ರಮ ವಹಿಸಿ ಒಳ್ಳೆಯ ಬೆಳೆ ಬರಲಿ ಎಂದು ಕಾಳಜಿ ವಹಿಸುತ್ತಿದ್ದರು.
ಬಹುತೇಕ ಈರುಳ್ಳಿ ಗೆ ಹಳದಿ ರೋಗ ಕಾಡುತ್ತಿದೆ. ಕಳೆದ ವರ್ಷ ರಾಜ್ಯದಲ್ಲಿ ಪ್ರವಾಹ ಉಂಟಾಗಿ ಈರುಳ್ಳಿ ಬೆಳೆ ಹಾನಿಯಾಗಿತ್ತು. ಈ ವರ್ಷವಾದರು ಈರುಳ್ಳಿ ಬೆಳೆ ರೈತರ ಕಣ್ಣಿರು ಒರೆಸಲಿದೆ ಎನ್ನುವ ಭರವಸೆ ಹೊಂದಿದ್ದರು.
ಆದರೆ ರೈತನಿಗೆ ಹುಲುಸಾಗಿ ಬಂದ ಈರುಳ್ಳಿ ಜಮೀನು ನಲ್ಲಿ ಯೇ ರೋಗಕ್ಕೆ ತುತ್ತಾಗಿ ಹಳದಿ ಹೊಂದಿ ಒಣಗಿ ಕೊಳೆತು ಹೋಗುತ್ತಿದೆ.
ಎಷ್ಟೋ ಔಷಧಿ ಸಿಂಪಡಣೆ ಮಾಡಿದರೂ ಹತೋಟಿಗೆ ಬಾರದೆ ರೈತ ಕಂಗಾಲಾಗಿದ್ದಾನೆ.
ಈರುಳ್ಳಿ ಬೆಳೆ ಉತ್ತಮವಾಗಿಯೇ ಇತ್ತು ಕಳೆದ 15 ದಿನಗಳಿಂದ ಬೆಳೆಗೆ ಹಳದಿ ರೋಗಕ್ಕೆ ತಗುಲಿ ಬೆಳೆ ಹಳದಿ ಹೊಂದಿ ಸಸಿಗಳು ಸಾಯುತ್ತಿವೆ. ತಾಲೂಕಿನ ಕೃಷಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ತೋಟಕ್ಕೆ ತೆರಳಿ ಸೂಕ್ತ ಮಾರ್ಗದರ್ಶನ ಮಾಡುತ್ತಿಲ್ಲ ತಾಲೂಕಿನ ಬಹುತೇಕ ಗ್ರಾಮಗಳ ಕೃಷಿ ಸಹಾಯಕ ಯಾರು ಎಂಬುವುದು ರೈತರಿಗೆ ಮಾಹಿತಿ ಇಲ್ಲ. ರೈತರ ತೋಟಗಳಿಗೆ ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೆರಳಿ ಸೂಕ್ತ ಮಾರ್ಗದರ್ಶನ ಮಾಡಿ ಬೆಳೆ ನಿರ್ವಹಣೆ ಮಾಹಿತಿ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ದಿನಗಳಿಂದ
ಮಳೆ ಹೆಚ್ಚಾಗಿ ಕಷ್ಟ ದಲ್ಲಿರುವ ರೈತರನ್ನು ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ. ಕೋಡಲೇ ಸಂಬಂಧಿಸಿದ ಅಧಿಕಾರಿಗಳು ವಿವಿಧ ಗ್ರಾಮಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ರಂಗಣ್ಣ ನಾಡಗೌಡ. ಕಲ್ಮೇಶ ಅರಳಿಮಟ್ಟಿ. ಕಲ್ಲಪ್ಪ ಹುನಸಿಕಟ್ಟಿ. ಅಶೋಕ ಅರಳಿಕಟ್ಟಿ. ಕಿಷ್ಣಪ್ಪ ಹುನಸಿಕಟ್ಟಿ. ಹನಮಂತ ಹೂಗಾರ. ವಾಸಪ್ಪ ಹೂಗಾರ. ಸಚಿನ್ ನಾಯಿಕ. ಸಂಜು ಅರಳಿಕಟ್ಟಿ. ಯಲ್ಲಪ್ಪ ನ್ಯಾಮಗೌಡ. ಸೇರಿ ಅನೇಕ ರೈತರು ಒತ್ತಾಯಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.