ತಹಶೀಲ್ದಾರ ಮೇಲೆ ಹಲ್ಲೆ

0

ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಾದಾಮಿ ತಾಲೂಕಾ ಘಟಕದ ವತಿಯಿಂದ ಪ್ರತಿಭಟನೆ

ತಹಶೀಲ್ದಾರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ: ಬಾದಾಮಿ

ಬಾದಾಮಿ: ಬಾದಾಮಿ ತಹಶೀಲ್ದಾರ ಸುಹಾಸ ಇಂಗಳೆ ಅವರ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಾದಾಮಿ ತಾಲೂಕಾ ಘಟಕದ ವತಿಯಿಂದ ಪ್ರತಿಭಟನೆಯನ್ನು ನಡೆಸಿ ಗ್ರೇಡ್-2 ತಹಶೀಲ್ದಾರ ವಸ್ತ್ರದ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ನಂತರ ಮಾತನಾಡಿದ ಮುಖಂಡರು, ಕೇಂದ್ರ ಅಧ್ಯಯನ ತಂಡದೊಂದಿಗೆ ಬಾದಾಮಿ ತಹಶೀಲ್ದಾರ ಸುಹಾಸ ಇಂಗಳೆ ಅವರು ಬಾದಾಮಿ ಸುತ್ತಮುತ್ತಲಿನ ಗ್ರಾಮಗಳ ಬೆಳೆ ಹಾನಿಯನ್ನು ವಿಕ್ಷಣೆ ಮಾಡಿ ಬಾದಾಮಿಗೆ ಮರಳುವ ಸಂದರ್ಭದಲ್ಲಿ ಮಾರ್ಗ ಮಧ್ಯ ನೀರಬೂದಿಹಾಳ ಗ್ರಾಮದ ಸಮೀಪ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸ ಎಂದು ಹೇಳಲು ಹೋದ ತಹಶೀಲ್ದಾರ ಅವರ ಮೇಲೆ ನಾಗಪ್ಪ ಜಾನಮಟ್ಟಿ ಹಾಗೂ ಅವನ ಸಹೋದರ ಶಿವಾನಂದ ಜಾನಮಟ್ಟಿ ಇಬ್ಬರು ಸೇರಿಕೊಂಡು ಹಲ್ಲೆ ಮಾಡಿದ ಘಟನೆ ಬಾದಾಮಿ ತಾಲೂಕಿನಲ್ಲಿ ನಡೆದಿದೆ.
ಕೋವಿಡ್-೧೯ ಮಹಾಮಾರಿ ಸಂದರ್ಭದಲ್ಲಿ ಹಗಲಿರುಳು ಸಾರ್ವಜನಿಕ ಹಿತ ಕಾಪಾಡಿದ ಹಾಗೂ ನೆರೆ ಹಾವಳಿ ಸಂದರ್ಭದಲ್ಲಿ ಕಾರ್ಯನಿರತರಾಗಿದ್ದ ಸುಹಾಸ ಇಂಗಳೆ ಅವರನ್ನು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಒಬ್ಬ ಉನ್ನತ ಹುದ್ದೆಯ ಮೇಲೆ ಇರುವ ಅಧಿಕಾರಿಗಳಮೇಲೆ ಈ ರೀತಿ ಹಲ್ಲೆಗಳಾದರೆ ಇನ್ನೂ ಸಾಮಾನ್ಯರ ಪಾಡೇನು ಈ ರೀತಿ ಸರ್ಕಾರಿ ನೌಕರರ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಗಳು ಮುಂದುವರೆದರೆ ನಮ್ಮ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆಯನ್ನು ಮಡಲಾಗುತ್ತದೆ. ಇ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ವಿಶೇಷ ಗಮನ ಹರಿಸಿ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರ ಹಿತ ಕಾಪಾಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನೌಕಕರ ಸಂಘದ ತಾಲೂಕಾಧ್ಯಕ್ಷ ರಮೇಶ ಅಥಣಿ, ಬಾದಾಮಿ ಕಂದಾಯ ನೀರಿಕ್ಷಕರಾದ ಶಿವು ಜೋಗಿನ, ಶಿವಾನಂದ ದ್ಯಾಂಪೂರ, ಸದಾಶಿವ ಮರಡಿ, ಹಾಗೂ ಅನೇಕ ಸರ್ಕಾರಿ ನೌಕರರ ಪದಾಧಿಕಾರಿಗಳು ಪಾಲ್ಗೊಂಡಿದರು.

ವರದಿ…ನಾಗರತ್ನಾ ದಾಟನಾಳ
ಬಾದಾಮಿ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.