ಶಾಕಿಂಗ್… ದೈತ್ಯ ಸೊಳ್ಳೆಗಳ ಗುಂಪಿನ ದಾಳಿ, ಬಲಿಯಾದ ನೂರಾರು ಪ್ರಾಣಿಗಳು

ಸೊಳ್ಳೆ ದಾಳಿಯಲ್ಲಿ ನೂರಾರು ಸಾಕು ಪ್ರಾಣಿಗಳು ಸೇರಿ ಕಾಡು ಪ್ರಾಣಿಗಳು ಸಹ ಬಲಿಯಾಗಿವೆ

0

ರಾಕ್ಷಸಿ ಸೊಳ್ಳೆಗಳ ಗುಂಪೊಂದು ನೂರಾರು ಜಾನುವಾರು ಮತ್ತು ವನ್ಯಜೀವಿಗಳನ್ನು ಕೊಂದಿದೆ. ನಂಬಲಸಾದ್ಯವಾದ್ರೂ ಹಾನಿಯನ್ನು ಒಂದು ಮಿಲಿಯನ್ ಡಾಲರ್ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಹೆಲಿಕಾಪ್ಟರ್‌ಗಳು ಹೊಲಕ್ಕೆ ಇಳಿದು ಸೊಳ್ಳೆ ನಿವಾರಕವನ್ನು ಸಿಂಪಡಿಸಿವೆ.

ಲೂಸಿಯಾನ : ರಾಕ್ಷಸಿ ಸೊಳ್ಳೆಗಳ ಗುಂಪೊಂದು ನೂರಾರು ಜಾನುವಾರು ಮತ್ತು ವನ್ಯಜೀವಿಗಳನ್ನು ಕೊಂದಿದೆ. ಅಮೆರಿಕದ ಲೂಸಿಯಾನದಲ್ಲಿ ಇತ್ತೀಚೆಗೆ ಈ ಘಟನೆ ಬೆಳಕಿಗೆ ಬಂದಿದೆ. ವಿವರಗಳಿಗೆ ಹೋಗುವುದಾದರೆ .. ಕಳೆದ ತಿಂಗಳು ಆಗಸ್ಟ್ 27 ರಂದು ಲಾರಾ ಚಂಡಮಾರುತದಿಂದಾಗಿ ದೊಡ್ಡ ಸಂಖ್ಯೆಯ ದೈತ್ಯ ಸೊಳ್ಳೆಗಳು ಲೂಯಿಸಿಯಾನಕ್ಕೆ ಬಂದಿದ್ದವು. ಅಲ್ಲಿನ ಎಮ್ಮೆಗಳು, ಹಸುಗಳು, ಕುದುರೆಗಳು ಮತ್ತು ಜಿಂಕೆಗಳ ಮೇಲೆ ದಾಳಿ ಮಾಡಿದವು, ಪ್ರಾಣಿಗಳ ರಕ್ತ ಹೀರಿಕೊಂಡು ಹಲವಾರು ಪ್ರಾಣಿಗಳನ್ನು ಕೊಂದೇ ಬಿಟ್ಟವು. 

ನಂಬಲಸಾದ್ಯವಾದ್ರೂ ಹಾನಿಯನ್ನು ಒಂದು ಮಿಲಿಯನ್ ಡಾಲರ್ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಹೆಲಿಕಾಪ್ಟರ್‌ಗಳು ಹೊಲಕ್ಕೆ ಇಳಿದು ಸೊಳ್ಳೆ ನಿವಾರಕವನ್ನು ಸಿಂಪಡಿಸಿವೆ.

ಸೊಳ್ಳೆ ನಿವಾರಕವನ್ನು ಸಿಂಪಡಿಸಿದ ನಂತರ ದೊಡ್ಡ ಸೊಳ್ಳೆಗಳ ಆವಳಿ ಸ್ವಲ್ಪ ಶಾಂತವಾಗಲು ಕಾರಣವಾಯಿತು. ಸೊಳ್ಳೆ ದಾಳಿಯಲ್ಲಿ ಸುಮಾರು 400 ಸಾಕು ಪ್ರಾಣಿಗಳು ಮತ್ತು 30 ಜಿಂಕೆಗಳು ಸಾವನ್ನಪ್ಪಿವೆ. ಸೆಪ್ಟೆಂಬರ್ 2 ರಂದು ವ್ಯಕ್ತಿಯೊಬ್ಬರು ತೆಗೆದ ಫೋಟೋ ದೈತ್ಯ ಸೊಳ್ಳೆಗಳು ರಕ್ತ ಹೀರಿ ಕೊಂದ ಪ್ರಾಣಿಗಳನ್ನು ಪ್ರತಿಬಿಂಬಿಸುತ್ತದೆ. 

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.