ಮಾನವೀಯತೆ ಮೆರೆದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ
ತಪ್ಪಿಸಿಕೊಂಡಿದ್ದ ಬಾಲಕನನ್ನು ಅವನ ಪೋಷಕರಿಗೆ ಹಸ್ತಾಂತರ
ಅಥಣಿ: ತನ್ನವರಿಂದ ತಪ್ಪಿಸಿಕೊಂಡು ಕಣ್ಣೀರು ಹಾಕುತ್ತಿದ್ದ 3 ವರ್ಷದ ಬಾಲಕನನ್ನು ಅವನ ಕುಟುಂಬದವರಿಗೆ ಹಸ್ತಾಂತರಿಸುವ ಮೂಲಕ ಅಥಣಿಯ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾನವೀಯತೆ ಮೆರೆದಿದ್ದಾರೆ.
ಅಥಣಿ: ತನ್ನವರಿಂದ ತಪ್ಪಿಸಿಕೊಂಡು ಕಣ್ಣೀರು ಹಾಕುತ್ತಿದ್ದ 3 ವರ್ಷದ ಬಾಲಕನನ್ನು ಅವನ ಕುಟುಂಬದವರಿಗೆ ಹಸ್ತಾಂತರಿಸುವ ಮೂಲಕ ಅಥಣಿಯ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾನವೀಯತೆ ಮೆರೆದಿದ್ದಾರೆ.
ಬಾಲಕನಿಗೆ ಹೆಸರು ಮತ್ತು ವಿಳಾಸ ಕೇಳಿ ಆ ಬಾಲಕ ಹೆಸರು ಮತ್ತು ವಿಳಾಸ ಹೇಳದೆ ಇದ್ದ ಸಮಯದಲ್ಲಿ ಆ ಬಾಲಕನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ತಿಂಡಿ ತಿನಿಸುಗಳನ್ನು ಕೊಡಿಸಿ ಸತತವಾಗಿ ಮೂರುಗಂಟೆಗಳ ಕಾಲ ಸಂಬಂಧಪಟ್ಟ ಸಂಬಂಧಿಕರನ್ನು ಹುಡುಕಲು ಓಣಿ ಗಲ್ಲಿಗಳಲ್ಲಿ ಸುತ್ತಾಡಿದರು ಎಷ್ಟೇ ಪ್ರಯತ್ನಿಸಿದರೂ ಸಿಗದೇ ಇದ್ದಾಗ ಸ್ಥಳೀಯ ಪೋಲಿಸ್ ಠಾಣೆಯ ಸಿಪಿಐ ಶಂಕರಗೌಡ ಬಸನಗೌಡರ ಅವರನ್ನು ಸಂಪರ್ಕಿಸಿದಾಗ ಅವರ ಸಲಹೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಬಾಲಕನನ್ನು ಹಸ್ತಾಂತರಿಸಿ ಎಂದು ಸಲಹೆ ನೀಡಿದರು.
ಅವರ ಸಲಹೆ ಮೇರೆಗೆ ಆ ಬಾಲಕನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಆ ಬಾಲಕನ ತಾಯಿ ಹಾಗೂ ಸಂಬAಧಿಕರು ಬಾಲಕನ್ನು ಹುಡುಕಿಕೊಂಡು ಗಜಾನನ ಮಂಗಸೂಳಿಯವರ ಮನೆಗೆ ಬಂದರು ಸ್ಥಳದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ಸುಜಾತಾ ಪಾಟೀಲ ಅವರ ಸಮ್ಮುಖದಲ್ಲಿ ಬಾಲಕನನ್ನು ತಾಯಿಗೆ ಹಸ್ತಾಂತರಿಸಲಾಯಿತು.
ಕಳೆದುಹೋದ ಕರುಳಿನ ಕುಡಿ ಸಿಕ್ಕ ಸಂತೋಷದಲ್ಲಿ ಆ ಬಾಲಕನ ತಾಯಿ ಗಜಾನನ ಮಂಗಸೂಳಿ ಅವರಿಗೆ ಕಣ್ಣಿರಿನಿಂದ ಧನ್ಯವಾದಗಳನ್ನು ಸಲ್ಲಿಸಿದಳು.
ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರಿಗೆ ಸಾಮಾಜಿಕ ಕಾರ್ಯವೈಖರಿಗೆ ಅಥಣಿ ಪಟ್ಟಣದ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..