ಗುಮ್ಮಟ ನಗರಿಯಲ್ಲಿ ಮತ್ತೇ ಮೊಳಗಿದ ಗುಂಡಿನ ಸದ್ದು

0

Gummata Nagari : Bijapur News

ಬಿಜಾಪುರ : ಭೀಮಾತೀರದ ಮಹಾದೇವ ಸಾಹುಕಾರ ಮೇಲೆ ನಡೆದ ಫೈರಿಂಗ್ ಕೇಸ್ ಇನ್ನು ತನಿಖೆ ಹಂತದಲ್ಲಿರುವಾಗಲೇ ಗುಮ್ಮಟ ನಗರಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ.

ಬಿಜಾಪುರ ನಗರದ ಎಮ್ ಮಾರ್ಟ ಬಳಿ ಬುಧವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ತುಳಸಿರಾಮ ಹರಿಜನ ಎಂಬಾತನು ಗುಂಡಿನ ದಾಳಿ ನಡೆಸಿ ಫರಾರಿಯಾಗಿದ್ದಾನೆ. ಘಟನೆಯಲ್ಲಿ ಬೇಗಂ ತಾಲಾಬ ತಾಂಡಾ ನಿವಾಸಿ ಬದ್ದು ರಾಠೋಡ (33) ಎಂಬಾತನಿಗೆ ಗುಂಡು ತಗುಲಿದೆ.

ಇನ್ನು ಗಾಯಗೊಂಡಿರುವ ಬದ್ದು ರಾಠೋಡನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನು ಮಾತಿಗೆ ಮಾತು ಬೆಳೆದು ಗಲಾಟೆಯಲ್ಲಿ ಮಧ್ಯೆ ಗುಂಡು ಹಾರಿಸಿ ತುಳಸಿರಾಮ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇನ್ನು ಸ್ಥಳಕ್ಕೆ ಎಸ್ಪಿ ಅನುಪಮ ಅಗ್ರವಾಲ್,  ಎಎಸ್ಪಿ ರಾಮ್ ಅರಸಿದ್ಧಿ ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ. ಈ ಕುರಿತು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.